Tuesday, September 22, 2026

BDA Apartments

ಮಲೈಕಾ ಮುಂಬೈನ ಬಾಂದ್ರಾ ನಿವಾಸ ಸೀಲ್ ಡೌನ್ ! BDA JK_Adv BDA Adv
Home Cinema ಮಲೈಕಾ ಮುಂಬೈನ ಬಾಂದ್ರಾ ನಿವಾಸ ಸೀಲ್ ಡೌನ್ !

ಮಲೈಕಾ ಮುಂಬೈನ ಬಾಂದ್ರಾ ನಿವಾಸ ಸೀಲ್ ಡೌನ್ !

ಬೆಂಗಳೂರು, ಜೂನ್ 11, 2020 (www.justkannada.in): ಮಲೈಕಾ ಮುಂಬೈನ ಬಾಂದ್ರಾ ನಿವಾಸ ಸೀಲ್ ಆಗಿದೆ! ಮಲೈಕಾ ವಾಸವಿದ್ದ ಬಾಂದ್ರಾ ಕಟ್ಟದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಈಗ ಇಡೀ ಕಟ್ಟಡವನ್ನು ಸೀಲ್ ಮಾಡಲಾಗಿದೆ.

ಅಂದಹಾಗೆ ಬಾಲಿವುಡ್ ಕಲಾವಿದರು ಮುಂಬೈ ನಗರ ಸುತ್ತಾಡುತ್ತಿದ್ದಾರೆ. ತಿಂಗಳ ಬಳಿಕ ಕಲಾವಿದರು ಮನೆಯಿಂದ ಹೊರಬಂದು ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗಷ್ಟೆ ನಟ ವಿಕ್ಕಿ ಕೌಸಲ್ ವಾಸವಿದ್ದ ಕಟ್ಟಡವನ್ನು ಸೀಲ್ ಮಾಡಲಾಗಿತ್ತು. ಇನ್ನೂ ಬೋನಿ ಕಪೂರ್ ಮನೆಯಲ್ಲಿ ಕೆಲಸದವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಬೋನಿ ಮತ್ತು ಮಕ್ಕಳು 14 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು.