ಕಾನೂನು ಉಲ್ಲಂಘಿಸಿ ಕೆಆರ್ ಎಸ್ ಡ್ಯಾಂ ಪಕ್ಕದಲ್ಲೇ ರೇವ್ ಪಾರ್ಟಿ: ಕಣ್ಮುಚ್ಚಿ ಕುಳಿತ್ರಾ ಪೊಲೀಸರು….?

ಮಂಡ್ಯ,ಜೂ,11,2020(www.justkannada.in): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದು ಈ ನಡುವೆ ಲಾಕ್ ಡೌನ್ ಸಡಿಲ ಬಳಿಕವೂ ರಾಜ್ಯ ಸರ್ಕಾರ ಕೆಲ ನಿರ್ಬಂಧಗಳನ್ನ ವಿಧಿಸಿದೆ. ಆದರೆ ಅಂತಹ ನಿರ್ಬಂಧಗಳನ್ನ ಗಾಳಿಗೆ ತೂರಿ ಕೆ.ಆರ್ ಎಸ್ ಡ್ಯಾಂ ಪಕ್ಕದಲ್ಲೇ ಗುಂಡು ತುಂಡು ಪಾರ್ಟಿ  ನಡೆದಿರುವುದು ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣ  ಕೆ.ಆರ್ ಎಸ್ ಡ್ಯಾಂ ಪಕ್ಕದಲ್ಲೇ ಗುಂಡು, ತುಂಡು ಪಾರ್ಟಿ ನಡೆದಿದೆ. ರಾತ್ರಿ ವೇಳೆ ಶ್ರೀಮಂತ ಮನೆತನದವರು ಹತ್ತಾರು ಕಾರುಗಳಲ್ಲಿ ಆಗಮಿಸಿ ಡ್ಯಾಂ ಪಕ್ಕದ ಮೈಸೂರು ಮೂಲದ ಸಂಜಯ್ ಎಂಬುವರಿಗೆ ಸೇರಿದ ತೋಟದಲ್ಲಿ  ಪಾರ್ಟಿ ಆಯೋಜನೆ ಮಾಡಿದ್ದಾರೆ.mandya-krs-rave-party-violation-law-police

ಕೊರೋನಾ ಸಂದರ್ಭದಲ್ಲಿ ತಡರಾತ್ರಿಯಲ್ಲಿ ಕಾನೂನು ಉಲ್ಲಂಘಿಸಿ ಈ ರೇವ್ ಪಾರ್ಟಿ ಆಯೋಜಿಸಿದ್ದು, ಆರ್ಕೆಸ್ಟ್ರಾ, ಧ್ವನಿವರ್ಧಕ ಬಳಸಿ, ಶಾಮಿಯಾನ, ಟೇಬಲ್ ಹಾಕಿ ಪಾರ್ಟಿ‌ ಮಾಡಿದ್ದಾರೆ, ಈ ಬಗ್ಗೆ ಪ್ರಶ್ನೆ ಮಾಡಲು ಹೋದ ಸಾರ್ವಜನಿಕರಿಗೆ ಅಲ್ಲಿದ್ದವರು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಪೊಲೀಸ್ ಠಾಣೆ ಸಮೀಪದಲ್ಲೇ ಪಾರ್ಟಿ ನಡೆಯುತ್ತಿದ್ದರೂ ಪೊಲೀಸರು, ನೀರಾವರಿ ಇಲಾಖೆ ಅಧಿಕಾರಿಗಳು  ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆಯೂ ಹಲವು ಬಾರಿ ಅಕ್ರಮ ಪಾರ್ಟಿಗಳು ನಡೆದಿದ್ದು ನೀರಾವರಿ ಇಲಾಖೆ ನೆಪ ಮಾತ್ರಕ್ಕೆ ದೂರು ದಾಖಲಿಸಿ, ಮೈಮರೆತು ಕುಳಿತಿದೆ ಎಂಬ ಆಕ್ರೋಶ ಕೇಳಿ ಬಂದಿದೆ.

Key words: mandya- KRS- Rave party – violation – law-police