Monday, October 12, 2026

Dasara Wishes

ವಿಶ್ವದರ್ಜೆಯ ಫಿಲ್ಮ್ ಸಿಟಿ ಮೈಸೂರಿನಲ್ಲಿ ನಿರ್ಮಿಸುತ್ತೇವೆ: ಸಿ.ಎಂ ಘೋಷಣೆ Das...
Happy Dasara
Home Crime ಬಾರ್ ಓಪನ್ ಆಗಿದ್ದೇ ತಡ, ಒಟ್ಟಿಗೆ ಬಂದ್ರು ಹತ್ತಾರು ಹಳ್ಳಿಗಳ ನೂರಾರು ಜನ !

ಬಾರ್ ಓಪನ್ ಆಗಿದ್ದೇ ತಡ, ಒಟ್ಟಿಗೆ ಬಂದ್ರು ಹತ್ತಾರು ಹಳ್ಳಿಗಳ ನೂರಾರು ಜನ !

ಚಿಕ್ಕಮಗಳೂರು, ಏಪ್ರಿಲ್ 28, 2020 (www.justkannada.in): ಬಾರ್ ಓಪನ್ ಆಗಿದೆ ಎಂದು ಎಣ್ಣೆಗೆ ಜನ ಮುಗಿಬಿದ್ದಾರೆ. ಎಣ್ಣೆಗಾಗಿ ವೈನ್ ಶಾಪ್ ಮುಂದೆ ನೂರಾರು ಜನರ ದುಂಡು ಪೊಲೀಸರು ದಂಗಾಗಿದ್ದಾರೆ!

ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ವೈನ್ ಶಾಪ್ ಡೋರ್ ಮುರಿದು ಮದ್ಯ ಕಳ್ಳತನ ಮಾಡಲಾಗಿತ್ತು. ಪೊಲೀಸರ ಪರಿಶೀಲನೆಗಾಗಿ ವೈನ್ ಶಾಪ್ ಡೋರ್ ಓಪನ್ ಮಾಡಿಸಿದ್ದರು.

ಇದನ್ನು ಕಂಡ ಸುತ್ತಮುತ್ತಲಿನ ಗ್ರಾಮದ ಮದ್ಯಪ್ರಿಯರು ಮಾರಾಟ ಶುರುವಾಗಿದೆ ಎಂದು ಭಾರಿ ಸಂಖ್ಯೆಯಲ್ಲಿ ಮುಗಿಬಿದ್ದರು. ಮದ್ಯ ಪ್ರಿಯರಿಗೆ ತಿಳಿಹೇಳಿ ಗುಂಪು ಚದುರಿಸಿದ ಪೊಲೀಸರು, ಕಳ್ಳತನದ ಕುರಿತು ತನಿಖೆ ಮುಂದುವರಿಸಿದ್ದಾರೆ.