Monday, October 12, 2026

Dasara Wishes

Happy Dasara
Home Front Page ದಿನ ಪತ್ರಿಕೆ ಹಂಚಿಕೆ ತಡೆ ಆದೇಶದ ವಿರುದ್ಧ ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ

ದಿನ ಪತ್ರಿಕೆ ಹಂಚಿಕೆ ತಡೆ ಆದೇಶದ ವಿರುದ್ಧ ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ

ಮುಂಬೈ, ಏಪ್ರಿಲ್ 28, 2020 (www.justkannada.in): ಬಾಂಬೆ ಹೈಕೋರ್ಟ್​ ಮಹಾರಾಷ್ಟ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮನೆಗಳಿಗೆ ದಿನ ಪತ್ರಿಕೆ ಹಂಚುವುದಕ್ಕೆ ನಿರ್ಬಂಧ ವಿಧಿಸಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿರುವ ಬಾಂಬೆ ಹೈಕೋರ್ಟ್​ನ ಔರಂಗಾಬಾದ್​ ಪೀಠ, ಈ ಬಗ್ಗೆ ವಿಚಾರಣೆ ನಡೆಸಿತು. ಆರೋಗ್ಯ ತಜ್ಞರ ಅಭಿಪ್ರಾಯ ಪಡೆಯದೇ ನಿಮ್ಮಿಷ್ಟ ಬಂದಂತೆ ಹೇಗೆ ನಡೆದುಕೊಂಡಿರುವಿರಿ ಎಂದು ಪೀಠ ಪ್ರಶ್ನಿಸಿದೆ.

ಪತ್ರಿಕೆಯನ್ನು ಬೇಕಿದ್ದರೆ ಅಂಗಡಿಗೆ ಹೋಗಿ ಖರೀದಿಸಬಹುದು, ಆದರೆ ಮನೆ ಮನೆಗೆ ಹಂಚುವ ಹಾಗಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಈ ಬಗ್ಗೆ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಅವರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಲ್ಲ ವಿವರಗಳನ್ನು ಹಾಗೂ ತಾವು ಕೇಳಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುವ ಮೂಲಕ ಹೆಚ್ಚುವರಿಯಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂನ್​ 11ಕ್ಕೆ ಮುಂದೂಡಿದ್ದಾರೆ.