Sunday, September 13, 2026

BDA Apartments

Home Front Page ತಮಿಳುನಾಡು ಮಾದರಿ ಕಾಯಿದೆ ತರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ, ಸಂಶೋಧನೆ ಸಂಸ್ಥೆ  ಆಗ್ರಹ

ತಮಿಳುನಾಡು ಮಾದರಿ ಕಾಯಿದೆ ತರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ, ಸಂಶೋಧನೆ ಸಂಸ್ಥೆ  ಆಗ್ರಹ

ಶವ ಸಂಸ್ಕಾರ, ರೋಗ ತಪಾಸಣೆಗೆ ತೊಂದರೆ ಕೊಡುವವರ ಮೇಲೆ  ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ

ಮೈಸೂರು, ಏಪ್ರಿಲ್ 28, 2020 (www.justkannada.in): ತಮಿಳುನಾಡು ಸರಕಾರ ಜಾರಿ ಮಾಡಿರುವ tamil nadu public health act sect 74 ರೀತಿ ನೂತನ ಕಾಯಿದೆಯನ್ನೂ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು  ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ ಹಾಗೂ ಸಂಶೋಧನೆ ಸಂಸ್ಥೆ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಸರ್ಕಾರ ತನ್ನ ರಾಜ್ಯ ಪತ್ರ (gejet)ದಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ನಮೂದಾಗಿರುವ ಸಾಂಕ್ರಾಮಿಕ ರೋಗಗಳಿಂದ  ಮೃತ ಪಟ್ಟ ವ್ಯಕ್ತಿ ಯನ್ನು ಗೌರವದಿಂದ ಹಾಗೂ ಘನತೆ ಯಿಂದ ಅಂತ್ಯ ಸಂಸ್ಕಾರ ಮಾಡಲು ಯಾರಿಂದಲೂ ತೊಂದರೆ ಯಾಗದಂತೆ ತೆಮಿಳು ನಾಡು ಸರ್ಕಾರ ಇತ್ತೀಚೆಗೆ tamil nadu public health act sect 74 ಕಾಯಿದೆ ಜಾರಿದೆ ತಂದಿದೆ.

ಶವಸಂಸ್ಕಾರ ಕ್ಕೇ ಹಾಗೂ ರೋಗ ತಪಾಸಣೆಗೆ ತೊಂದರೆ ಕೊಡುವವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು    ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ ಹಾಗೂ ಸಂಶೋಧನೆ ಸಂಸ್ಥೆ  ಅಧ್ಯಕ್ಷರೂ ಆದ ವಕೀಲ ಆ.ಮ ಭಾಸ್ಕರ್ ಆಗ್ರಹಿಸಿದ್ದಾರೆ.