Saturday, August 8, 2026

BDA Apartments

Home Crime ಪೊಲೀಸರು ಕೊರೊನಾ ಡ್ಯೂಟಿಯಲ್ಲಿದ್ರೆ… ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ

ಪೊಲೀಸರು ಕೊರೊನಾ ಡ್ಯೂಟಿಯಲ್ಲಿದ್ರೆ… ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ

ಬೆಂಗಳೂರು, ಏಪ್ರಿಲ್ 22, 2020 (www.justkannada.in): ಕೊರೊನಾ ಸೋಂಕು ನಡುವೆಯೇ ಬೆಂಗಳೂರಿನಲ್ಲಿ ಮರ್ಡರ್ ನಡೆದಿದೆ.

ಬೆಂಗಳೂರಿನಲ್ಲಿ ಪೊಲೀಸರು ಸೋಂಕು ನಿವಾರಣೆಗೆ ಮುಂದಾದ್ರೆ ಹಂತಕರ ಅಟ್ಟಹಾಸ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೊಲೆ ನಡೆದಿದೆ.

ಕೊಲೆಯಾದವನು ರಾಜಾನುಕುಂಟೆ ಪೊಲೀಸ್ ಠಾಣಾ ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಕ್ವಾಡೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮತ್ಕೂರ್ ಬಳಿ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿಯ ಮೃತ ದೇಹ ನೋಡಿ ಹೆದರಿರುವ ಸ್ಥಳೀಯರು. ಬೆರೆಡೆ ಕೊಲೆ ಮಾಡಿ ಮತ್ಕೂರು ಬಳಿ ಮೃತ ದೇಹವನ್ನ ಎಸೆದಿರುವ ದುಷ್ಕರ್ಮಿಗಳು. ಘಟನೆ ಸ್ಥಳಕ್ಕೆ ಧಾವಿಸಿದ ಸೋಲದೇವನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.