Saturday, August 8, 2026

BDA Apartments

Home Front Page ಮಾಲೀಕರೇ ತಮ್ಮ ಬಾರ್ ಕಳ್ಳತನ ಮಾಡಿಸುವ ಸಂದರ್ಭ ಬಂದಿದೆ ಎಂದ ಮಾಜಿ ಸಚಿವ ಎಚ್.ವಿಶ್ವನಾಥ್

ಮಾಲೀಕರೇ ತಮ್ಮ ಬಾರ್ ಕಳ್ಳತನ ಮಾಡಿಸುವ ಸಂದರ್ಭ ಬಂದಿದೆ ಎಂದ ಮಾಜಿ ಸಚಿವ ಎಚ್.ವಿಶ್ವನಾಥ್

ಮೈಸೂರು, ಏಪ್ರಿಲ್ 22, 2020 (www.justkannada.in): ವಾರದಲ್ಲಿ ಎರಡು ದಿನ ಮಧ್ಯ ಮಾರಾಟ ಮಾಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ಮದ್ಯ ಮಾರಾಟ ನಿಷೇಧದ ಬಗ್ಗೆ ಸುದ್ದಿವಾಹಿನಿಗೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿದ್ದು, ಮದ್ಯ ಮಾರಾಟ ಮಾಡುವುದರಿಂದ ಇದನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.

ವಾರದಲ್ಲಿ ಎರಡು ದಿನ ಎಲ್ಲ ಬಾರ್‌, ವೈನ್ ಶಾಪ್ಗಳನ್ನು ತೆರೆದು, ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು.

ಇಂದು ಬಾರ್ಗಳು ಕಳ್ಳತನ ಆಗುತ್ತಿದೆಮಾಲೀಕರು ತಮ್ಮ ಬಾರ್ಅನ್ನು ತಾವೇ ಕಳ್ಳತನ ಮಾಡಿಸುವ ಸಂದರ್ಭ ಬಂದಿದೆ. ಕಳ್ಳ ಸಂತೆಯಲ್ಲಿ ಮದ್ಯ ಮಾರಾಟ ಆಗುತ್ತಿದೆ. ಹೀಗಾಗಿ ಸರ್ಕಾರ ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬಹುದು ಎಂದು ಹೆಚ್ವಿಶ್ವನಾಥ್ ಮನವಿ ಮಾಡಿದ್ದಾರೆ.