Sunday, August 23, 2026

BDA Apartments

Home Front Page ಶ್ರವಣಶಕ್ತಿ ದಿನದ ಅಂಗವಾಗಿ ಮೈಸೂರಿನ ‘ಐಶ್(AIISH)ನಲ್ಲಿ ‘ಶಿಶುಗಳಲ್ಲಿ ಕಿವಿ ಮತ್ತು ಶ್ರವಣಶಕ್ತಿಯ ಸಹಜ ಬೆಳವಣಿಗೆ’ಕುರಿತು ಸಲಹೆ...

ಶ್ರವಣಶಕ್ತಿ ದಿನದ ಅಂಗವಾಗಿ ಮೈಸೂರಿನ ‘ಐಶ್(AIISH)ನಲ್ಲಿ ‘ಶಿಶುಗಳಲ್ಲಿ ಕಿವಿ ಮತ್ತು ಶ್ರವಣಶಕ್ತಿಯ ಸಹಜ ಬೆಳವಣಿಗೆ’ಕುರಿತು ಸಲಹೆ ಕಾರ್ಯಕ್ರಮ

ಮೈಸೂರು,ಫೆ,13,2020(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಶ್ರವಣಶಕ್ತಿ ದಿನ’ದ ಅಂಗವಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಗರ್ಭಿಣಿಯರಿಗಾಗಿ’ ಶ್ರವಣಶಕ್ತಿಯ ರಕ್ಷಣೆ ಕುರಿತು ತಿಳುವಳಿಕೆ ಕಾರ್ಯಕ್ರಮ’ವನ್ನು ಆಯೋಜಿಸಿದೆ.

ಇದೇ ಫೆಬ್ರವರಿ16ರ ಬೆಳಿಗ್ಗೆ 10:30ರಿಂದ 12.00ರವರೆಗೆ ‘ಶಿಶುಗಳಲ್ಲಿ ಕಿವಿ ಮತ್ತು ಶ್ರವಣಶಕ್ತಿಯ ಸಹಜ ಬೆಳವಣಿಗೆ’ಕುರಿತು ಸಲಹೆ ನೀಡುವ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಗರ್ಭಿಣಿಯರಿಗಾಗಿ’ ತಿಳುವಳಿಕೆ ಕಾರ್ಯಕ್ರಮ’ವನ್ನು ಆಯೋಜಿಸಿದೆ.

ನೋಂದಣಿಗಾಗಿ’ ಸಂವಹನ ನ್ಯೂನತೆ ತಡೆಗಟ್ಟುವಿಕೆ ವಿಭಾಗದ ಶ್ರೀ.ಉಲ್ಲಾಸ್ ಎನ್. ಭಾರ್ಗವ್(+918050951586)/ ಶ್ರೀ ಹರೀಶ್ ಕುಮಾರ್(+919738421106) ಅವರನ್ನು ಸಂಪರ್ಕಿಸಬಹುದು. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಪ್ರಮುಖ ಸಂಸ್ಥೆಯಾಗಿದೆ. ಇದು ದೇಶದ ನಾಗರೀಕರಲ್ಲಿ ಶ್ರವಣಶಕ್ತಿಯನಷ್ಟವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಅವಿರತವಾಗಿ ಶ್ರಮಿಸುತ್ತಿದೆ.

Key words: mysore- AIISH-Audiovisual Day-  Program – Influence – Ears and Hearing – Infants’.