Thursday, August 13, 2026

BDA Apartments

Home Crime ನಂಜನಗೂಡು ಗ್ರಾಮಾಂತರ ಪೊಲೀಸರ ಕಾರ್ಯಚರಣೆ: ಕೇರಳದ ಮೆಡಿಕಲ್‌ ವೇಸ್ಟ್ ಸುರಿಯುತ್ತಿದ್ದ ಲಾರಿಗಳ ವಶ…

ನಂಜನಗೂಡು ಗ್ರಾಮಾಂತರ ಪೊಲೀಸರ ಕಾರ್ಯಚರಣೆ: ಕೇರಳದ ಮೆಡಿಕಲ್‌ ವೇಸ್ಟ್ ಸುರಿಯುತ್ತಿದ್ದ ಲಾರಿಗಳ ವಶ…

ಮೈಸೂರು,ಜ,28,2020(www.justkannada.in): ಕೇರಳದ ಮೆಡಿಕಲ್‌ ವೇಸ್ಟ್ ಅನ್ನ ನಂಜನಗೂಡಿನ ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಸುರಿಯುತ್ತಿದ್ದ ಲಾರಿಗಳನ್ನ ನಂಜನಗೂಡು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸಿ  ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಮೆಡಿಕಲ್ ವೇಸ್ಟ್ ಸುರಿಯುತ್ತಿದ್ದ ವ್ಯಕ್ತಿಗಳು ಹಾಗೂ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ರಿಷ್ಯಂತ್, ಸುಮಾರು 2 ಟನ್ ನಷ್ಟು ಮೆಡಿಕಲ್ ವೇಸ್ಟ್ ಸಾಗಿಸುತ್ತಿದ್ದ ಲಾರಿ ಹಿಂಬಾಲಿಸಿ 2 ಲಾರಿಗಳು ಹಾಗೂ ಕೇರಳ ಮೂಲದ ಇಬ್ಬರನ್ನ ಪೊಲೀಸರು ವಶಕ್ಕೆಪಡೆದಿದ್ದಾರೆ. ಇದಕ್ಕೆ ಸಹಕರಿಸುತ್ತಿದ್ದ ಟಿ.ನರಸಿಪುರದ ಮೂಲದ ಅಬ್ಜಲ್ ಜಾನ್ ಎಂಬ ಅರೋಪಿಯನ್ನು ಸಹ ಬಂಧಿಸಲಾಗಿದೆ. ಇನ್ನು ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.

Key words: Medical waste- disposal -trucks – Kerala- Nanjangud Rural- Police.