Saturday, September 19, 2026

BDA Apartments

Home Front Page ಸಚಿವ ಸ್ಥಾನಕ್ಕಾಗಿ ಹೆಚ್ಚಾದ ಲಾಬಿ: ಸಿಎಂ ಭೇಟಿಯಾಗಿ ಚರ್ಚಿಸಿದ ಹಿರಿಯ ಶಾಸಕ ಉಮೇಶ್ ಕತ್ತಿ…

ಸಚಿವ ಸ್ಥಾನಕ್ಕಾಗಿ ಹೆಚ್ಚಾದ ಲಾಬಿ: ಸಿಎಂ ಭೇಟಿಯಾಗಿ ಚರ್ಚಿಸಿದ ಹಿರಿಯ ಶಾಸಕ ಉಮೇಶ್ ಕತ್ತಿ…

ಬೆಂಗಳೂರು,ಜ,29,2020(www.justkannada.in):   ಈ ತಿಂಗಳಾಂತ್ಯದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್ ಯಡಿಯೂರಪ್ಪ ಹರಸಾಹಸಪಡುತ್ತಿದ್ದು ಈ ಹಿನ್ನೆಲೆ ಮಂತ್ರಿಗಿರಿಗಾಗಿ ತೀವ್ರ ಲಾಬಿ ನಡೆಸುತ್ತಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಇಂದು ಸಿಎಂ ಬಿಎಸ್ ವೈ ರನ್ನ ಭೇಟಿಯಾಗಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕ ಉಮೇಶ್ ಕತ್ತಿ ಪದೇ ಪದೇ ಸಿಎಂ ಬಿಎಸ್ ವೈ ಅವರನ್ನ ಭೇಟಿಯಾಗಿ ಒತ್ತಡ ಹಾಕುತ್ತಿದ್ದರು. ಈ ನಡುವೆ ಸಂಪುಟ ವಿಸ್ತರಣೆ ಹತ್ತಿರವಾಗುತ್ತಿದ್ದಂತೆ ಶಾಸಕ ಉಮೇಶ್ ಕತ್ತಿ ಲಾಬಿ ತೀವ್ರಗೊಳಿಸಿದ್ದಾರೆ. ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಶಾಸಕ ಉಮೇಶ್ ಕತ್ತಿ ಭೇಟಿ ನೀಡಿ ಸಚಿವ ಸಂಪುಟ ಸೇರ್ಪಡೆ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಫೆಬ್ರವರಿ 17 ರಂದು ಖಾಲಿ ಇರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಖಾಲಿ ಇರುವ ಒಂದು ಪರಿಷತ್ ಸ್ಥಾನವನ್ನ ತಮಗೆ ನೀಡುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಇತ್ತ ಇದೇ ಸ್ಥಾನಕ್ಕೆ ಮಾಜಿ ಸಚಿವ ಆರ್.ಶಂಕರ್ ಸಹ ಪಟ್ಟು ಹಿಡಿದಿದ್ದು, ಯಾರಿಗೆ ಈ ಸ್ಥಾನ ಲಭಿಸಲಿದೆ ಕಾದು ನೋಡಬೇಕಿದೆ.

Key words:  lobby-ministerial position- Senior MLA- Umeshkatti- met – CM