Tuesday, September 22, 2026

BDA Apartments

ಸ್ವತಃ ಕಬಡ್ಡಿ ಆಡುವ ಮೂಲಕ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಗಮನ ಸೆಳೆದ ಶಾಸಕ BD...
Home Front Page ಸ್ವತಃ ಕಬಡ್ಡಿ ಆಡುವ ಮೂಲಕ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಗಮನ ಸೆಳೆದ ಶಾಸಕ

ಸ್ವತಃ ಕಬಡ್ಡಿ ಆಡುವ ಮೂಲಕ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಗಮನ ಸೆಳೆದ ಶಾಸಕ

ತುಮಕೂರು,ಜ,27,2020(www.justkannada.in):  ತುರುವೇಕೆರೆ ಶಾಸಕ ಮಸಾಲ ಜಯರಾಮ್ ಕಬಡ್ಡಿ ಪಂದ್ಯಾವಳಿಯನ್ನು ಸ್ವತಃ ಕಬಡ್ಡಿ ಆಡುವ ಮೂಲಕ ಉದ್ಘಾಟಿಸಿ ಗಮನ ಸೆಳೆದಿದ್ದಾರೆ.

ತುರುವೇಕೆರೆ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ವತಿಯಿಂದ 157ನೇ ಶ್ರೀ ಸ್ವಾಮಿ ವಿವೇಕಾನಂದ ಜಯಂತೋತ್ಸವ ಪ್ರಯುಕ್ತ ಕಬ್ಬಡ್ಡಿ ಪಂದ್ಯಾವಳಿ ಅಯೋಜಿಸಲಾಗಿತ್ತು.

ಶಾಸಕ ಮಸಾಲೆ ಜಯರಾಂ ಪಂದ್ಯಾವಳಿಗೆ ಸ್ವತಃ ತಾವೇ ಕಬ್ಬಡ್ಡಿ ಪಟುಗಳೊಂದಿಗೆ ಆಡುವ ಮೂಲಕ ಚಾಲನೆ ನೀಡಿದರು. ಕಬಡ್ಡಿ ಕಬಡ್ಡಿ ಎಂದು ಅಂಕಣಕ್ಕಿಳಿದ ಶಾಸಕರು ರೈಡ್ ಮಾಡಿ ಒಬ್ಬರನ್ನು ಔಟ್ ಮಾಡಿದರು. ಶಾಸಕರು ಒಂದು ಪಾಯಿಂಟ್ ಗಳಿಸುತಿದ್ದಂತೆ ಅಭಿಮಾನಿಗಳ ಸಿಳ್ಳೆ ಚಪ್ಪಾಳೆ ಹೊಡೆದು ಮುಗಿಲು ಮುಟ್ಟಿತ್ತು.ಇದನ್ನು ಕಂಡು ಕ್ರೀಡಾಪಟುಗಳು ಶಾಸಕರನ್ನು ಎತ್ತಿ ಕುಣಿದಾಡಿದರು. ಈ ಹಿಂದೆ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ, ಶಾಸಕ‌ ಸಿ.ಎಸ್.ಪುಟ್ಟರಾಜು ಕಬಡ್ಡಿ ಆಡುವ ಮೂಲಕ ಗಮನ ಸೆಳೆದಿದ್ದರು.

Key words: tumkur- MLA-inaugurated -kabaddi tournament – playing -kabaddi.