Monday, August 3, 2026

BDA Apartments

Home Front Page ಪಕ್ಷ ಹೇಳಿದರೇ ಸಚಿವ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧ- ಡಿಸಿಎಂ ಗೋವಿಂದ ಕಾರಜೋಳ…

ಪಕ್ಷ ಹೇಳಿದರೇ ಸಚಿವ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧ- ಡಿಸಿಎಂ ಗೋವಿಂದ ಕಾರಜೋಳ…

ವಿಜಯಪುರ,ಜ,27,2020(www.justkannada.in):   ಪಕ್ಷ ಹೇಳಿದರೇ ರಾಜೀನಾಮೆ ನೀಡಲು ಸಿದ್ಧ.  ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ. ಪಕ್ಷದಿಂದಲೇ ನಾನು ಬೆಳೆದಿದ್ದೇನೆ.  ಹೀಗಾಗಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಬಿಎಸ್ ಯಡಿಯೂರಪ್ಪ ಏನೇ ತೀರ್ಮಾನ ತೆಗೆದುಕೊಂಡರೂ ಅವರ ತೀರ್ಮಾನಕ್ಕೆ ಬದ್ಧ ಎಂದು ನುಡಿದರು.

ಪಕ್ಷ ಬಯಸಿದರೇ ನಾನು ಸಚಿವಸ್ಥಾನ ಬಿಡಲು ಸಿದ್ಧನಿದ್ದೇನೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ವಿಜಯಪುರ ಜಿಲ್ಲೆಗೆ ಒಂದು ಸಚಿವಸ್ಥಾನ ಬೇಕು. ನಾನೇನು ಹೊರ ಜಿಲ್ಲೆಯವನಲ್ಲ. ಅಖಂಡ ವಿಜಯಪುರ ಜಿಲ್ಲೆಯ ನಾನು ಬಾಗಲಕೋಟೆ ವಿಭಜನೆ ಬಳಿಕ ಅಲ್ಲಿನ ಮುಧೋಳ ಕ್ಷೇತ್ರದಲ್ಲಿದ್ದೇನೆ. ಇಷ್ಟಕ್ಕೂ ನನ್ನ ಮೂಲ ವಿಜಯಪುರ ಜಿಲ್ಲೆ ಎಂದು ಗೋವಿಂದಕಾರಜೋಳ ತಿಳಿಸಿದರು.

Key words: I am -ready -give up – ministerial position-DCM -Govinda Karajola.