Thursday, September 17, 2026

BDA Apartments

ಕೃಷ್ಣಮಾಚಾರಿ ಶ್ರೀಕಾಂತ್‌, ಅಂಜುಮ್‌ ಚೋಪ್ರಾಗೆ ಸಿ.ಕೆ. ನಾಯ್ಡು ಪ್ರಶಸ್ತಿ BDA J...
Home Front Page ಕೃಷ್ಣಮಾಚಾರಿ ಶ್ರೀಕಾಂತ್‌, ಅಂಜುಮ್‌ ಚೋಪ್ರಾಗೆ ಸಿ.ಕೆ. ನಾಯ್ಡು ಪ್ರಶಸ್ತಿ

ಕೃಷ್ಣಮಾಚಾರಿ ಶ್ರೀಕಾಂತ್‌, ಅಂಜುಮ್‌ ಚೋಪ್ರಾಗೆ ಸಿ.ಕೆ. ನಾಯ್ಡು ಪ್ರಶಸ್ತಿ

ಹೊಸದಿಲ್ಲಿ, ಡಿಸೆಂಬರ್ 28, 2019 (www.justkannada.in): ಕೃಷ್ಣಮಾಚಾರಿ ಶ್ರೀಕಾಂತ್‌ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್‌ ಚೋಪ್ರಾ 2019ನೇ ಸಾಲಿನ ಪ್ರತಿಷ್ಠಿತ ಸಿ.ಕೆ. ನಾಯ್ಡು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.

ಜ. 14ರಂದು ಮುಂಬಯಿಯಲ್ಲಿ ನಡೆಯಲಿರುವ ಬಿಸಿಸಿಐ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. 60ರ ಹರೆಯದ ಶ್ರೀಕಾಂತ್‌ ತಮಿಳುನಾಡು ಕ್ರಿಕೆಟಿನ ಬಹು ದೊಡ್ಡ ಹೆಸರಾಗಿದ್ದು, 1981-1992ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು

ಇನ್ನು 42ರ ಹರೆಯದ ಅಂಜುಮ್‌ ಚೋಪ್ರಾ 12 ಟೆಸ್ಟ್‌ ಮತ್ತು 127 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.