Tuesday, September 22, 2026

BDA Apartments

ನನ್ನ ಸೋಲಿಗೆ ಬಚ್ಚೇಗೌಡರೇ ನೇರ ಕಾರಣ- ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಪರಾಜಿತ...
Home Front Page ನನ್ನ ಸೋಲಿಗೆ ಬಚ್ಚೇಗೌಡರೇ ನೇರ ಕಾರಣ- ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್…

ನನ್ನ ಸೋಲಿಗೆ ಬಚ್ಚೇಗೌಡರೇ ನೇರ ಕಾರಣ- ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್…

ಬೆಂಗಳೂರು,ಡಿ,9,2019(www.justkannada.in):  ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲನುಭವಿಸಿದ ಬೆನ್ನಲ್ಲೆ ಸಂಸದ ಬಚ್ಚೇಗೌಡರ ವಿರುದ್ದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.

ನನ್ನ ಸೋಲಿಗೆ ಸಂಸದ ಬಚ್ಚೇಗೌಡರೇ ನೇರಕಾರಣ. ಪುತ್ರ ಶರತ್ ಬಚ್ಚೇಗೌಡರ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ದ ಬಿಜೆಪಿ ಹೈಕಮಾಂಡ್ ಕ್ರಮ ಜರುಗಿಸಬೇಕು ಎಂದು ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಟಿಬಿ ನಾಗರಾಜ್,  ಸಂಸದ ಬಚ್ಚೇಗೌಡರಿಗೆ ಪುತ್ರ ವ್ಯಾಮೋಹ ಜಾಸ್ತಿ ಪುತ್ರನ ಪರ ಕೆಲಸ ಮಾಡಿ ನನಗೆ ಮೋಸಮಾಡಿದ್ದಾರೆ. ನನ್ನ ಸೋಲಿಗೆ ಸಂಸದ ಬಚ್ಚೇಗೌಡರೇ ನೇರಕಾರಣ. ಹೀಗಾಗಿ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

ಹಾಗೆಯೇ ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ. ಮತದಾರರ ತೀರ್ಪನ್ನ ಗೌರವಿಸುತ್ತೇನೆ ಎಂದು ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

Key words: Bachchagowda – direct cause – my defeat-hosakote-BJP’s defeated candidate- MTB Nagaraj