ಕೆ.ಆರ್ ಪೇಟೆ ಬಿಜೆಪಿ ಗೆಲುವು ಹಿನ್ನೆಲೆ: ಸಿಎಂ ಬಿಎಸ್ ವೈ ಹುಟ್ಟೂರಿನಲ್ಲಿ  ಬಿ.ವೈ ವಿಜಯೇಂದ್ರಗೆ ಅದ್ಧೂರಿ ಸ್ವಾಗತ…

ಮಂಡ್ಯ,ಡಿ,9,2019(www.justkannada.in):  ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಸಾಧಿಸಿದ ಹಿನ್ನೆಲೆ, ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲು ರಣತಂತ್ರ ರೂಪಿಸಿದ್ದ  ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಗೆ ಬಿಎಸ್ ವೈ ಹುಟ್ಟೂರು ಬೂಕನಕೆರೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಗೆಲುವು ಸಾಧಿಸುತ್ತಿದ್ದಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಗೆ ಬಿ.ವೈ ವಿಜಯೇಂದ್ರ ಆಗಮಿಸಿದರು. ಈ ವೇಳೆ ಗ್ರಾಮದಲ್ಲಿ ವಿಜಯೇಂದ್ರ ಅವರಿಗೆ ಸ್ವಾಗತ ಕೋರಲಾಯಿತು.

ಬಿವೈ ವಿಜಯೇಂದ್ರ ಅವರು ಬೂಕನಕೆರೆ ಗ್ರಾಮದ ಗೋಗುಲಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ದೇವಾಲಯದಲ್ಲೂ ಕಾರ್ಯಕರ್ತರು ವಿಜಯೇಂದ್ರಗೆ ಹಾರ ಹಾಕಿ ಜೈಕಾರ ಕೂಗಿ ಸನ್ಮಾನಿಸಿದರು. ಪೂಜೆ ಬಳಿಕ ಬಿಜೆಪಿ ವಿಜಯಕ್ಕಾಗಿ ಕಾರ್ಯಕರ್ತರಿಗೆ  ಸಿಹಿ ಹಂಚಿ ವಿಜಯೇಂದ್ರ ಸಂಭ್ರಮಾಚರಣೆ ಮಾಡಿದರು.

Key words: KR Pet –BJP- victory – Welcome – BY Vijayendra –bukanakere-spacial worship