ಪುತ್ರ ಶರತ್ ಬಚ್ಚೇಗೌಡರ ಗೆಲುವಿನ ಬಗ್ಗೆ ಸಂಸದ ಬಚ್ಚೇಗೌಡ ಹೇಳಿದ್ದೇನು ಗೊತ್ತೆ..?

ನವದೆಹಲಿ,ಡಿ,9,2019(www.justkannada.in): ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ದ ಶರತ್ ಬಚ್ಚಗೌಡ ಜಯ ಸಾಧಿಸಿದ್ದಾರೆ.

ತಮ್ಮ ಪುತ್ರ ಶರತ್ ಬಚ್ಚೇಗೌಡ ಗೆಲುವಿನ ಬಗ್ಗೆ ನವದೆಹಲಿಯಲ್ಲಿ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಬಚ್ಚೇಗೌಡರು,  ಜನರ ಒತ್ತಾಯದ ಮೇರೆಗೆ ಶರತ್ ಬಚ್ಚೇಗೌಡ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ.  ಆತ ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದಾನೆ. ನನ್ನ ಮಗನ ಗೆಲುವು ನನಗೆ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಾಗೆಯೇ ನನ್ನ ಶರತ್  ಪರ ಪ್ರಚಾರಕ್ಕೆ ಹೋಗಲಿಲ್ಲ. ನಾನು ಬಿಜೆಪಿ ವಿರುದ್ದವಾಗಿ ಕೆಲಸ ಮಾಡಿಲ್ಲ. ಹೀಗಾಗಿ ನನ್ನ ವಿರುದ್ದ ಬಿಜೆಪಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಂಸದ ಬಚ್ಚೇಗೌಡ ತಿಳಿಸಿದರು.

Key words: hoskote-by election MP Bachegowda – about -his son- Sarath Bachegauda-victory