Thursday, August 6, 2026

BDA Apartments

Home Front Page ಹುಣಸೂರಿನಲ್ಲಿ ಸೋಲು: ಪರಾಜಿತ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ….

ಹುಣಸೂರಿನಲ್ಲಿ ಸೋಲು: ಪರಾಜಿತ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ….

ಮೈಸೂರು,ಡಿ,9,2019(www.justkannada.in):  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು 12 ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿ ಸರ್ಕಾರ ಸುಭದ್ರ ಮಾಡಿಕೊಂಡಿದೆ. ಆದರೆ ಬಹಳ ಕುತೂಹಲ ಕೆರಳಿಸಿದ್ದ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ವಿಶ್ವನಾಥ್ ಸೋಲನುಭವಿಸಿದ್ದಾರೆ .

ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಪರಾಜಿತ ಬಿಜೆಪಿ ಅಭ್ಯರ್ಥಿ  ಹೆಚ್.ವಿಶ್ವನಾಥ್, ಜನತೆ ಕೊಟ್ಟ ತೀರ್ಪಿಗೆ ತಲೆಬಾಗುವೆ. ಮೈತ್ರಿ ಸರ್ಕಾರವನ್ನ ಬೀಳಿಸಿದ್ದಕ್ಕೆ ನನ್ನ ವಿರುದ್ದ  ಅಪಪ್ರಚಾರ ಮಾಡಿದರು. ಹೀಗಾಗಿ ಸೋಲಾಯಿತು. ಜಿಟಿ ದೇವೆಗೌಡರ ನಡೆ ಸಹ ನನ್ನ ಸೋಲಿಗೆ ಕಾರಣ. ಅಧಿಕಾರ ಇಲ್ಲದಿದ್ದರೂ ನಾನು ಜನ ಸೇವೆ ಮಾಡುತ್ತೇವೆ ಎಂದು ತಿಳಿಸಿದರು.

ನನ್ನ ಬೆಂಬಲಕ್ಕೆ ಬಿಎಸ್ ಯಡಿಯೂರಪ್ಪ ಇದ್ದಾರೆ. ಎದೆಗುಂದದಂತೆ ಧೈರ್ಯ ಹೇಳಿದ್ದಾರೆ. ಜನರು ಕೊಟ್ಟಿರುವ ತೀರ್ಪಿಗೆ ತಲೆಬಾಗುತ್ತೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಭರ್ಜರಿ ಗೆಲವು ಸಾಧಿಸಿದ್ದಾರೆ.

Key words: hunsur-by election- Defeat – BJP candidate -H Vishwanath -reaction