Wednesday, October 7, 2026

BDA Apartments

Selfless service BDA JK_Adv BDA Adv
Home Front Page ಹೈದರಾಬಾದ್: ‘ಅತ್ಯಾಚಾರಿ’ಗಳ ಹುಟ್ಟಡಗಿಸಿದ ವೀರ ಕನ್ನಡಿಗ ಎನ್‍ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ್

ಹೈದರಾಬಾದ್: ‘ಅತ್ಯಾಚಾರಿ’ಗಳ ಹುಟ್ಟಡಗಿಸಿದ ವೀರ ಕನ್ನಡಿಗ ಎನ್‍ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ್

ಬೆಂಗಳೂರು, ಡಿಸೆಂಬರ್ 06, 2019 (www.justkannada.in): ವೀರ ಕನ್ನಡಿಗ ವಿಶ್ವನಾಥ್ ಸಜ್ಜನರ್ ಅತ್ಯಾಚಾರಿಗಳ ಹುಟ್ಟಡಗಿಸಿದ್ದಾರೆ.

ಹೈದರಾಬಾದ್ ನಲ್ಲಿ ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ ವಿಶ್ವನಾಥ್ ಸಜ್ಜನರ್ ಅವರಿಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಹೌದು. ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಕನ್ನಡಿಗ, ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರು ಎನ್‍ಕೌಂಟರ್ ಮಾಡಿದ್ದಾರೆ.

ಕಾಮುಕರನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ರೇಪಿಸ್ಟ್ ಗಳ ಎನ್‍ಕೌಂಟರ್ ಬೆನ್ನಲ್ಲೇ ಹೈದಾರಾಬಾದ್‍ನಲ್ಲಿ ವಿದ್ಯಾರ್ಥಿಗಳು ಪೊಲೀಸರಿಗೆ ಜೈಕಾರ ಹಾಕುತ್ತಿದ್ದಾರೆ. ವಿಶ್ವನಾಥ್ ಸಜ್ಜನರ್ ಎನ್‍ಕೌಂಟರ್ ಸ್ಪೆಷಲಿಸ್ಟ್ ಆಗಿದ್ದು, ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ವಿಶ್ವನಾಥ್ ಸಜ್ಜನರ್ ವಾರಂಗಲ್ ಎಸ್‍ಪಿ ಆಗಿದ್ದರು. ಆಗ ಆಸಿಡ್ ದಾಳಿ ಆರೋಪಿಗಳು ಎನ್‍ಕೌಂಟರ್ ನಲ್ಲಿ ಹತ್ಯೆಗೈದಿದ್ದರು. ಆ ಎನ್‍ಕೌಂಟರ್ ಬಳಿಕ ಆ್ಯಸಿಡ್ ದಾಳಿಯಲ್ಲಿ ಇಳಿಕೆ ಕಂಡಿತ್ತು.

ವಿಶ್ವನಾಥ್ ಮೊದಲು ಆಂಧ್ರ ಪ್ರದೇಶಕ್ಕೆ ಆಯ್ಕೆ ಆಗಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಹೈದರಾಬಾದ್ ಕಮಿಷನರ್ ಆಗಿ ಎರಡೂವರೆ ವರ್ಷ ಆಗಿದೆ. ಅವರಿಗೆ ಮೊದಲು ಆಂಧ್ರದಲ್ಲೇ ಕೆಲಸ ಸಿಕ್ಕ ಕಾರಣ ಅವರು ಕರ್ನಾಟಕದಲ್ಲಿ ಕೆಲಸ ಮಾಡಿಲ್ಲ.