ಉತ್ತರ ಪ್ರದೇಶ ಸರ್ಕಾರ ನಿದ್ರಿಸುತ್ತಿದೆ : ಯುಪಿ ಪೊಲೀಸರು ತೆಲಂಗಾಣ ಪೊಲೀಸರ ದಕ್ಷತೆ ಅನುಸರಿಸಲಿ- ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ…

ಉತ್ತರ ಪ್ರದೇಶ,ಡಿ,6,2019(www.justkannada.in):  ಹೈದರಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನ ಎನ್ ಕೌಂಟರ್ ಮಾಡಿರುವ ತೆಲಂಗಾಣ ಪೊಲೀಸರ ಕಾರ್ಯವನ್ನ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಯಾವತಿ, ಹೈದರಬಾದ್ ಪೊಲೀಸರ ಕೆಲಸವನ್ನ ಶ್ಲಾಘಿಸುತ್ತೇನೆ. ತೆಲಂಗಾಣ ಪೊಲೀಸರ ಈ ದಕ್ಷತೆಯನ್ನ ಉತ್ತರ ಪ್ರದೇಶದ ಪೊಲೀಸರು ಅನುಸರಿಸಲಿ. ಉತ್ತರ ಪ್ರದೇಶದಲ್ಲಿ ಅಪರಾಧಗಳು ಹೆಚ್ಚುತ್ತಿದ್ದು, ಅಲ್ಲಿ ಜಂಗಲ್ ರಾಜ್ ನಡೆಯುತ್ತಿದೆ. ಉನ್ನಾವೋ ಕೇಸ್ ಆರೋಪಿಗಳಿಗೂ ಶಿಕ್ಷೆಯಾಗಬೇಕು.  ಸಂತ್ರಸ್ತೆಗೆ ಬೆಂಕಿ ಹಚ್ಚಿದವರಿಗೂ ಶಿಕ್ಷೆಯಾಗಲಿ  ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ, ಆದರೆ ರಾಜ್ಯ ಸರ್ಕಾರ ನಿದ್ರಿಸುತ್ತಿದೆ. ಇಲ್ಲಿ ಮತ್ತು ದೆಹಲಿಯಲ್ಲಿ ಪೋಲಿಸ್ ಹೈದರಾಬಾದ್ ಪೊಲೀಸರಿಂದ ಸ್ಫೂರ್ತಿ ಪಡೆಯಬೇಕು, ಆದರೆ ದುರದೃಷ್ಟವಶಾತ್ ಇಲ್ಲಿ ಅಪರಾಧಿಗಳನ್ನು ರಾಜ್ಯ ಅತಿಥಿಗಳಂತೆ ಪರಿಗಣಿಸಲಾಗುತ್ತದೆ, ಯುಪಿಯಲ್ಲಿ ಜಂಗಲ್ ರಾಜ್ ಇದೆ ಎಂದು ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದರು.

Key words: UP police- follow -efficiency – Telangana- police- BSP chief -Mayawathi.