Sunday, August 2, 2026

BDA Apartments

Home Front Page ಕಾಂಗ್ರೆಸ್ ಪಕ್ಷದ ನಾಯಕರು ‘ಆಜಾ ಆಜಾ’ ಅಂತಿದ್ರೆ ಇವರು ‘ಕಬಿ ನಹೀ’ ಅಂತಿದ್ದಾರೆ- ಸಚಿವ ಆರ್.ಅಶೋಕ್...

ಕಾಂಗ್ರೆಸ್ ಪಕ್ಷದ ನಾಯಕರು ‘ಆಜಾ ಆಜಾ’ ಅಂತಿದ್ರೆ ಇವರು ‘ಕಬಿ ನಹೀ’ ಅಂತಿದ್ದಾರೆ- ಸಚಿವ ಆರ್.ಅಶೋಕ್ ವ್ಯಂಗ್ಯ…..

ಬೆಂಗಳೂರು,ಡಿ,3,2019(www.justkannada.in):  ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಕುರಿತು ಲೇವಡಿ ಮಾಡಿರುವ ಕಂದಾಯ ಸಚಿವ ಆರ್.ಅಶೋಕ್, ಕಾಂಗ್ರೆಸ್ ಪಕ್ಷದ ನಾಯಕರು ಆಜಾ ಆಜಾ ಅಂತಿದ್ದರೇ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಕಬಿ ನಹೀ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ಕಾಂಗ್ರೆಸ್ ನವರ ಪಾಡು ಬಿಕ್ಷುಕರ ರೀತಿ ಆಗಿದೆ. ಕೈ ನಾಯಕರು ಸಿನಿಮಾದ ರೀತಿಯಲ್ಲಿ ಆಜಾ ಆಜಾ ಎಂದು ಹೇಳುತ್ತಿದ್ದಾರೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇಚೇಗೌಡ್ರು ಕಬಿ ನಹಿ ಕಬಿ ನಹಿ ಎನ್ನುವ ಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದರು.

ಹಾಗೆಯೇ ಮಲ್ಲಿಕಾರ್ಜುನ ಖರ್ಗೆ  ಡಿಸೆಂಬರ್ 9 ರಂದು ಸಿಹಿಸುದ್ದಿ ನೀಡುತ್ತೇವೆ ಎಂದಿದ್ದಾರೆ. ಆದರೆ ನಾವು ಈಗಲೇ ಸಿಹಿಸುದ್ದಿ ಕೊಡುತ್ತೇವೆ. ರಾಜ್ಯಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಈಗಾಗಲೇ ಗೆದ್ದಂತಾಗಿದೆ. ಕಾಂಗ್ರೆಸ್ ನವರು ಯುದ್ಧಕ್ಕೂ ಮೊದಲು ಶಸ್ತ್ರ ತ್ಯಾಗ ಮಾಡಿದ್ದಾರೆ ಎಂದು ಸಚಿವ ಆರ್. ಅಶೋಕ್ ಟಾಂಗ್ ನೀಡಿದರು.

Key words: Congress – leaders –ajaa ajaa-‘Kabi Nahi- Minister -R Ashok- irony