ರಾಜಕೀಯ ಬದಲಾವಣೆ ಪಕ್ಕಾ: ಅನರ್ಹ ಶಾಸಕರನ್ನ ಸೋಲಿಸುವುದೇ ನಮ್ಮ ಗುರಿ- ಮೈತ್ರಿ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…?

ಬೆಂಗಳೂರು,ಡಿ,4,2019(www.justkannada.in):  ಉಪಚುನಾವಣೆ ಬಳಿಕ ರಾಜಕೀಯ ಬದಲಾವಣೆ ಪಕ್ಕ. ನಾನು ಬದಲಾವಣೆ ಮಾಡುವುದಿಲ್ಲ ಜನರೇ ಬದಲಾವಣೆ ಮಾಡುತ್ತಾರೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಯಶವಂತ ಪುರ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಅನರ್ಹ ಶಾಸಕರನ್ನ ಸೋಲಿಸುವುದೇ ನಮ್ಮ ಗುರಿ. ಪಕ್ಷ ಹಾಗೂ ಜನರಿಗೆ ಮೋಸ ಮಾಡಿ ಬಿಜೆಪಿ ಪಕ್ಷಕ್ಕೆ ಹೋಗಿರುವ ಅನರ್ಹ ಶಾಸಕರನ್ನು ಮತದಾರರು ಸೋಲಿಸಿ ಬುದ್ಧಿ ಕಲಿಸಬೇಕು  ಎಂದು ಕರೆ ನೀಡಿದರು.

ಕಾಂಗ್ರೆಸ್ ಜೆಡಿಎಸ್ ಮತ್ತೆ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಮೈತ್ರಿ ಬಗ್ಗೆ ಮುಂದೆ ನೋಡೋಣ. ರಾಜಕೀಯ ಬದಲಾವಣೆ ಪಕ್ಕ ಜನರೇ ರಾಜಕೀಯ ಬದಲಾವಣೆ ಮಾಡುತ್ತಾರೆ. ಕೆಲ ಶಾಸಕರಿಗೆ ರಾಜೀನಾಮೆ ಕೊಡಬೇಡಿ ಎಂದು ನಾನು ಹೇಳಿದ್ದೆ.  ಆದರೂ ನನ್ನ ಮಾತು ಕೇಳದೆ ರಾಜೀನಾಮೆ ಕೊಟ್ಟರು.ಈಗ ಅನರ್ಹರು ಅನುಭವಿಸುತ್ತಿದ್ದಾರೆ. ನಿಮ್ಮನ್ನ ಈ ಮಟ್ಟಕ್ಕೆ ತಂದಿದ್ದು ಕಾಂಗ್ರೆಸ್. ಕಾಂಗ್ರೆಸ್ ನಿಮಗೆ ಏನು ಕಡಿಮೆ ಮಾಡಿತ್ತು ಎಂದು ಪ್ರಶ್ನಿಸಿದರು.

Key words: political change- defeat –disqualified MLA-former minister-DK Shivakumar