ವಸತಿ ಶಾಲೆಯಲ್ಲಿ  ರಾತ್ರಿ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು…

ಮೈಸೂರು,ಡಿ,3,2019(www.justkannada.in): ರಾತ್ರಿ ಊಟ ಮಾಡಿ ಮಲಗಿದ್ದ ವಸತಿ ಶಾಲಾ ವಿದ್ಯಾರ್ಥಿ ಬೆಳಿಗ್ಗೆ ನೋಡಿದಾಗ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ.

ಕೆ.ಆರ್ ನಗರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಬಳಿಯಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ  ಈ ಘಟನೆ ನಡೆದಿದೆ. ಗೌತಮ್ (14) ಮೃತ ವಿದ್ಯಾರ್ಥಿ.  ಗೌತಮ್ ಕೆ.ಆರ್ ನಗರ ತಾಲ್ಲೂಕು ಸಾಲೆಕೊಪ್ಪಲು ಗ್ರಾಮದ ಶಿವಣ್ಣ ಮತ್ತು ರೇಖಾವತಿ ದಂಪತಿ ಪುತ್ರ. ಗೌತಮ್ ಕಳೆದ ತಡರಾತ್ರಿ ಊಟ ಮಾಡಿದ ಬಳಿಕ ಮಲಗಿದ್ದನ್ನು. ಇಂದು ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳು ನೋಡಿದಾಗ ಗೌತಮ್ ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.

ಗೌತಮ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಪೋಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್ ನಗರ ತಹಸೀಲ್ದಾರ್ ಮಂಜುಳ, ಸಿ.ಪಿ.ಐ., ಪಿ.ಕೆ ರಾಜು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Suspected death – student-residential school-mysore-kr nagar