ನಿಮ್ಮನ್ನು ಸೇರಿದಂತೆ ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ ತಿಳಿಸಿ- ಮಾಜಿ ಸಿಎಂ ಸಿದ್ಧರಾಮಯ್ಯಗೆ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ತಿರುಗೇಟು….

ಮೈಸೂರು,ಡಿ,3,2019(www.justkannada.in):  ನನ್ನನ್ನು ಹೊಗಳುವುದು ಮತಕ್ಕಾಗಿ, ವಿಶ್ವನಾಥ್ ಸುಳ್ಳು ಹೇಳುತ್ತಾನೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್, ಸಿದ್ದರಾಮಯ್ಯ ಅವರಿಗೆ ಒಂದು ಪ್ರಶ್ನೆ ಕೇಳ್ತೇನೆ. ನಿಮ್ಮನ್ನು ಸೇರಿದಂತೆ ಸುಳ್ಳು ಹೇಳದ ರಾಜಕಾರಣಿ ಯಾರು ? ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ. ದಯಮಾಡಿ ನನಗೆ ತಿಳಿಸಿ ಎಂದು ಟಾಂಗ್ ನೀಡಿದ್ದಾರೆ.

ಹುಣಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಹೆಚ್.ವಿಶ್ವನಾಥ್,  ನಿಮ್ಮನ್ನು ಒಳ್ಳೆಯವರು ಎನ್ನುವುದನ್ನೇ ಸುಳ್ಳು ಎನ್ನುವುದಾದರೆ, ಇನ್ಮುಂದೆ ಹೊಗಳುವುದಿಲ್ಲ. ನಿಮ್ಮನ್ನು ಹೊಗಳಿ ನಮಗೆ ಯಾವ ಅನುಕೂಲವೂ ಆಗುವುದಿಲ್ಲ. ಯಾರನ್ನು ಎಷ್ಟು ಗೌರವಿಸಬೇಕು ಅನ್ನುವುದು ನನಗೆ ಗೊತ್ತಿದೆ. ಅದೇ ಗೌರವ ನಿಮಗೆ ಕೊಟ್ಟಿದ್ದೇನೆ. ಬೇಡ ಎಂದರೆ ಇನ್ನು ಮುಂದೆ ಕೊಡುವುದಿಲ್ಲ ಎಂದು ಕಿಡಿಕಾರಿದರು.

ಇಂದು ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ ಸಿದ್ಧರಾಮಯ್ಯ  ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿ ವಿಶ್ವನಾಥ್ ಸುಳ್ಳುಗಾರ.  ನನ್ನನ್ನು ಹೊಗಳುವುದು ಮತಕ್ಕಾಗಿ, ವಿಶ್ವನಾಥ್ ಸುಳ್ಳು ಹೇಳುತ್ತಾರೆ ಎಂದು ಹೇಳಿಕೆ ನೀಡಿದ್ದರು.

Key words: hunsur- by election-bjp candidate- h.vishwanath-former cm-siddaramaiah