ಉಪಚುನಾವಣೆ ಬಳಿಕ ನೂರಕ್ಕೆ ನೂರು ಪರ್ಸೆಂಟ್ ನಾವೇ ಕಿಂಗ್ ಮೇಕರ್- ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ನುಡಿ….

ಧಾರವಾಡ,ಡಿ,3,2019(www.justkannada.in):  ಉಪಚುನಾವಣೆ ಬಳಿಕ ನೂರಕ್ಕೆ ನೂರು ಪರ್ಸೆಂಟ್ ನಾವೇ ಕಿಂಗ್ ಮೇಕರ್ ಆಗುತ್ತೇವೆ ಎಂದು ಜೆಡಿಎಸ್ ಮುಖಂಡ ಎನ್.ಎಚ್ ಕೋನರೆಡ್ಡಿ ಭವಿಷ್ಯ ನುಡಿದರು.

ಧಾರವಾಡದಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರವನ್ನು ತಡೆಗಟ್ಟಬೇಕಾದರೇ 15 ಜನ ಅನರ್ಹರನ್ನು ಸೋಲಿಸಬೇಕು. ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್ಸ್. ಹೆಚ್.ಡಿ ದೇವೇಗೌಡರು ಹೆಚ್.ಡಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗ್ತಾರೆ ಎಂದು ನುಡಿದರು.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಕೋನರೆಡ್ಡಿ, ಡಿಸೆಂಬರ್ 9 ಒಳ್ಳೆಯ ದಿನ. ಅಂದೇ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತೇವೆ. ಮೈತ್ರಿ ಬಗ್ಗೆ ವರಿಷ್ಟ ಹೆಚ್.ಡಿ ದೇವೇಗೌಡರು ನಿರ್ಧರಿಸುತ್ತಾರೆ. ಈ ಬಗ್ಗೆ ಫಲಿತಾಂಶದ ನಂತರ ನೋಡಣ. ಮೈತ್ರಿಯಾದರೇ ನಮ್ಮ ಪಕ್ಷಕ್ಕೆ ಸಿಎಂ ಸ್ಥಾನ ನೀಡಿದ್ರೆ ಒಳ್ಳೆದು ಎನ್ನುವನು ನಾನು. ಎಚ್ ವಿಶ್ವನಾಥ್​​ ಅವರು ಹಿರಿಯರು ಅವರು ಪಕ್ಷ ಬಿಟ್ಟು ಹೋಗಬಾರದಿತ್ತು ಎಂದು ತಿಳಿಸಿದರು.

 ನಮ್ಮ ಪಕ್ಷದ ಬಗ್ಗೆ ಹಲವು ಜನ ಮುಖಂಡರು ಟೀಕೆಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ  ಬಸನಗೌಡ ಪಾಟೀಲ ಯತ್ನಾಳ್  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೋನರೆಡ್ಡಿ, ಮೊದಲ ನಿಮ್ಮ ಪರಿಸ್ಥಿತಿಗಳನ್ನು ನೋಡಿ, ವಿಜಯಪುರ ಜಿಲ್ಲೆಯಲ್ಲಿ ಒಬ್ಬರನ್ನು ಮಂತ್ರಿ ಮಾಡಲಿಲ್ಲ, ಯತ್ನಾಳ, ನಡಹಳ್ಳಿ ಅವರನ್ನು ಏಕೆ ಮಂತ್ರಿ ಮಾಡಲಿಲ್ಲ. ಮೊದಲು ಅವರ ಮನೆ ಶುದ್ಧ ಮಾಡಿಕೊಳ್ಳಿ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಟಾಂಗ್ ನೀಡಿದರು.

Key words: After – by-election-jds- King Maker-Former MLA -NH konareddy.