Sunday, September 20, 2026

BDA Apartments

650 ಚಿತ್ರ ಮಂದಿರಗಳಿಗೆ ‘ಒಡೆಯ’ನ ಎಂಟ್ರಿ ! BDA JK_Adv BDA Adv
Home Cinema 650 ಚಿತ್ರ ಮಂದಿರಗಳಿಗೆ ‘ಒಡೆಯ’ನ ಎಂಟ್ರಿ !

650 ಚಿತ್ರ ಮಂದಿರಗಳಿಗೆ ‘ಒಡೆಯ’ನ ಎಂಟ್ರಿ !

ಬೆಂಗಳೂರು, ಡಿಸೆಂಬರ್ 03, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಸಿನಿಮಾ ಇದೇ ಡಿಸೆಂಬರ್ 12ಕ್ಕೆ ರಾಜ್ಯಾದ್ಯಂತ ಸುಮಾರು 650 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ಈ ಸಿನಿಮಾ ತಮಿಳಿನ ‘ವೀರಂ’ ಚಿತ್ರದ ರೀಮೇಕ್ ಆಗಿದ್ದು ನಮ್ಮ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು ಸಿನಿಮಾ ಮಾಡಿರುವುದಾಗಿ ನಿರ್ದೇಶಕ ಎಂ.ಡಿ ಶ್ರೀಧರ್ ತಿಳಿಸಿದ್ದಾರೆ.

ಇನ್ನು ಒಡೆಯ ಸಿನಿಮಾ ಅಣ್ಣ ತಮ್ಮಂದಿರ ಬಾಂಧವ್ಯದ ಚಿತ್ರವಾಗಿದ್ದು, ದರ್ಶನ್ ಅಣ್ಣನಾಗಿ ನಟಿಸಿದ್ದಾರೆ. ತಮ್ಮಂದಿರ ಪಾತ್ರದಲ್ಲಿ ಯಶಸ್ ಸೂರ್ಯ, ಪಂಕಜ್, ಸಮರ್ಥ್ ಹಾಗೂ ಸಂದೇಶ್ ನಾಗರಾಜ್ ಕೊನೆಯ ಪುತ್ರ ಒಡೆಯನ ತಮ್ಮಂದಿರಾಗಿ ಬಣ್ಣ ಹಚ್ಚಿದ್ದಾರೆ.