Saturday, September 19, 2026

BDA Apartments

ವಿವಾಹ ಜೀವನಕ್ಕೆ ಕಾಲಿಟ್ಟ ಮನೀಷ್ ಪಾಂಡೆ-ಆಶ್ರಿತಾ ಶೆಟ್ಟಿ BDA JK_Adv BDA Adv
Home Front Page ವಿವಾಹ ಜೀವನಕ್ಕೆ ಕಾಲಿಟ್ಟ ಮನೀಷ್ ಪಾಂಡೆ-ಆಶ್ರಿತಾ ಶೆಟ್ಟಿ

ವಿವಾಹ ಜೀವನಕ್ಕೆ ಕಾಲಿಟ್ಟ ಮನೀಷ್ ಪಾಂಡೆ-ಆಶ್ರಿತಾ ಶೆಟ್ಟಿ

ಬೆಂಗಳೂರು, ಡಿಸೆಂಬರ್ 03, 2019 (www.justkannada.in): ಭಾರತದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ದಕ್ಷಿಣ ಭಾರತದ ಚಿತ್ರನಟಿ, ಕನ್ನಡತಿ ಆಶ್ರಿತಾ ಶೆಟ್ಟಿ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮನೀಷ್ ಸೂರತ್‌ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯನ್ನು ಜಯಿಸಲು ತಂಡವನ್ನು ಮುನ್ನಡೆಸಿದ್ದರು. ಫೈನಲ್ ಪಂದ್ಯ ಮುಗಿದ ಬೆನ್ನಿಗೇ ಮುಂಬೈಗೆ ತೆರಳಿದ ಮನೀಷ್ ಪಾಂಡೆ 26ರ ವಯಸ್ಸಿನ ಆಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ.

ಆಶ್ರಿತಾ 2012ರ ತುಳು ಚಿತ್ರ ‘ತೆಲಿಕೆದ ಬೊಳ್ಳಿ’ಯಲ್ಲಿ ನಟಿಸುವ ಮೂಲಕ ನಟನಾಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮೊದಲು 2010ರಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಟಿವಿ ಜಾಹೀರಾತು ಲೋಕಕ್ಕೆ ಪ್ರವೇಶಿಸಿದ್ದರು. ಕಳೆದ 7 ವರ್ಷಗಳಲ್ಲಿ ‘ಉದಯಂ ಎನ್‌ಎಚ್ 4’, ‘ಇಂದ್ರಜಿತ್’ ಸಹಿತ ಒಟ್ಟು 4 ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.