Friday, July 31, 2026

BDA Apartments

Home Cinema ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಕರೆಕ್ಟ್: ನಟ ಜಗ್ಗೇಶ್

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಕರೆಕ್ಟ್: ನಟ ಜಗ್ಗೇಶ್

ಬೆಂಗಳೂರು, ನವೆಂಬರ್ 30, 2019 (www.justkannada.in): ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ಸರಿ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನವರಸ ನಾಯಕ ಜಗ್ಗೇಶ್ ಕಿಡಿಕಾರಿ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಎಂದು ನಮ್ಮ ದೇಶದಲ್ಲಿ ಇಂಥ ಹೇಯಕೃತ್ಯದ ರಾಕ್ಷಸರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಬರುತ್ತದೋ ಅಲ್ಲಿಯವರೆಗು ಇಂಥ ಕೃತ್ಯ ತಡೆಯಲಾಗದು! ‘ಹೆಣ್ಣು ಕುಲವೆ ಸಾರ್ವಜನಿಕವಾಗಿ ಒಬ್ಬಂಟಿ ಪ್ರಯಾಣ ಕ್ಷೇಮವಲ್ಲಾ ಕಂದಮ್ಮಗಳೆ ಎಚ್ಚರ’ ಸಾಧ್ಯವಾದಷ್ಟು ನಿರ್ಜನ ಪ್ರದೇಶದಲ್ಲಿ ಒಂಟಿ ಸಂಚಾರ ಮಾಡದಿರಿ! ನಿಮ್ಮ ರಕ್ಷಣೆಗೆ ಆಧುನಿಕ ಅವಿಷ್ಕಾರ ಬಳಸಿ ಎಂದು ಸಲಹೆ ನೀಡಿದ್ದಾರೆ.