‘ಕಥಾ ಸಂಗಮ’ ಬಿಡುಗಡೆ ಮತ್ತು ರಿಷಬ್ ಶೆಟ್ಟಿ ಲೆಕ್ಕಾಚಾರ !

ಬೆಂಗಳೂರು, ನವೆಂಬರ್ 30, 2019 (www.justkannada.in): ರಿಷಭ್ ಶೆಟ್ಟಿ ಮುಖ್ಯಸ್ಥಿಕೆಯಲ್ಲಿ ಕಥಾ ಸಂಗಮ ಚಿತ್ರ ಡಿಸೆಂಬರ್ ೬ ಕ್ಕೆ ತೆರೆಗೆ ಬರುತ್ತಿದೆ.

ಸದ್ಯಕ್ಕೀಗ ಸ್ಯಾಂಡಲ್‌ವುಡ್ ರಿಲೀಸ್ ಸಿನಿಮಾಗಳ ಅತಿವೃಷ್ಟಿಗೆ ಸಿಲುಕಿದೆ. ಡಿಸೆಂಬರ್ ೬ಕ್ಕೆ ಕೂಡಾ ಸಾಕಷ್ಟು ಸಿನಿಮಾಗಳು ರಿಲೀಸಾಗುತ್ತಿವೆ. ಅಷ್ಟೊಂದು ಸಿನಿಮಾಗಳ ನಡುವೆ ಕಥಾ ಸಂಗಮವೂ ಬಿಡುಗಡೆ ಆಗುತ್ತಿದೆ.

ಈ ಪ್ರವಾಹದಲ್ಲಿ ತಾವು ಕೊಚ್ಚಿಕೊಂಡು ಹೋಗುವ ಅಪಾಯದಿಂದ ಪಾರಾಗಲು ನಿರ್ಮಾಪಕರಲ್ಲಿ ಒಬ್ಬರಾದ ರಿಷಭ್ ಶೆಟ್ಟಿ ಈ ಚಿತ್ರವನ್ನು ತಮ್ಮದೇ ಲೆಕ್ಕಾಚಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಅವರ ಪ್ರಕಾರ ಡಿಸೆಂಬರ್ ೬ ಕ್ಕೆ ಕಥಾ ಸಂಗಮಮಲ್ಟಿಪ್ಲೆಕ್ಸ್ ಹಾಗೂ ಜಿಲ್ಲಾ ಕೇಂದ್ರದಲ್ಲಿನ ಚಿತ್ರಮಂದಿರಗಳು ಸೇರಿದಂತೆ ಸರಿ ಸುಮಾರು ೬೦ ರಿಂದ ೭೦ ಚಿತ್ರಮಂದಿರಗಳಲ್ಲಿ ಮಾತ್ರ ತೆರೆಗೆ ಬರಲಿದೆ.

ಪ್ರತಿಕ್ರಿಯೆ ಗಮನಿಸಿ ಮುಂದಿನ ಹಂತದಲ್ಲಿ ಚಿತ್ರ ಬಿಡುಗಡೆ ಲೆಕ್ಕಾಚಾರ ಹಾಕಿದ್ದಾರೆ ರಿಷಬ್ ಶೆಟ್ಟಿ.