ಮುಕ್ತ ವಿವಿಯಿಂದ ಉದ್ಯೋಗಮೇಳ ಆಯೋಜನೆ ಶ್ಲಾಘನೀಯ: ಮೈಸೂರಿನಲ್ಲಿ ಉದ್ಯೋಗ ಸೃಷ್ಠಿಗೆ ಪಣ ತೊಟ್ಟಿದ್ದೇವೆಂದ ಸಂಸದ ಪ್ರತಾಪ್ ಸಿಂಹ…

ಮೈಸೂರು,ನ,30,2019(www.justkannada.in): ಮುಕ್ತ ವಿಶ್ವವಿದ್ಯಾಲಯದಿಂದ ಉದ್ಯೋಗ ಮೇಳ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗುಣಗಾನ ಮಾಡಿದರು.

ಮೈಸೂರಿನಲ್ಲಿ ಉದ್ಯೋಗಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಮಕ್ಕಳು ವಿದ್ಯಾವಂತರಾಗಿ ಒಳ್ಳೆಯ ಉದ್ಯೋಗ ಮಾಡಲಿ ಎಂಬುದು ತಂದೆ ತಾಯಿಯ ಆಶಯವಾಗಿದೆ. ಆದರೆ ಆದರೆ ವಿದ್ಯಾವಂತರಾಗಿ ನಿರುದ್ಯೋಗಿಗಳಾವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಯಾವೊಂದು ಕಂಪನಿಯು ಉದ್ಯೋಗ ಸೃಷ್ಠಿಗೆ ಮುಂದಾಗುತ್ತಿಲ್ಲ. ಆದ್ದರಿಂದ ಮೈಸೂರಿನಲ್ಲಿ ಉದ್ಯೋಗ ಸೃಷ್ಠಿಗೆ ನಾವು ಪಣ ತೊಟ್ಟಿದ್ದೇವೆ. ಮೈಸೂರಿನಲ್ಲಿ ಉದ್ಯೋಗಸೃಷ್ಠಿಗೆ ಬೇಕಾದ ಕ್ರಮಗಳನ್ನ ಕೈಗೊಂಡಿದ್ದೇವೆ. ದಶಪಥ ರಸ್ತೆ ನಿರ್ಮಾಣ, ರೈಲ್ವೆ, ವಿಮಾನ ಸೇವೆಗಳನ್ನು ಹೆಚ್ಚಿಸಿ ಕಂಪನಿಗಳು ಮೈಸೂರಿನಲ್ಲಿ ನೆಲೆಸುವ ವಾತಾವರಣ ನಿರ್ಮಿಸುತ್ತಿದ್ದೇವೆ ಉನ್ನತ ಕಂಪನಿಗಳನ್ನ ಮೈಸೂರಿಗೆ ಆಹ್ವಾನಿಸಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

Key words: mysore- KSOU- udyoga mela-MP- Prathap simha