Saturday, August 15, 2026

BDA Apartments

Home Front Page ರಂಗೇರಿದ ಹುಣಸೂರು ಉಪಕದನ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಚ್.ವಿಶ್ವನಾಥ್…

ರಂಗೇರಿದ ಹುಣಸೂರು ಉಪಕದನ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಚ್.ವಿಶ್ವನಾಥ್…

ಮೈಸೂರು,ನ,18,2019(www.justkannada.in):  ಹುಣಸೂರು ಉಪಚುನಾವಣಾ ಕದನ ರಂಗೇರಿದ್ದು ಬಿಜೆಪಿ ಅಭ್ಯರ್ಥಿಯಾಗಿ ಇಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಾಮಪತ್ರ ಸಲ್ಲಿಸಿದರು.

ಹುಣಸೂರಿನ ಎಸಿ ಕಚೇರಿಗೆ ತೆರಳಿದ ಹೆಚ್.ವಿಶ್ವನಾಥ್  ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯಲ್ಲಿ ವೀರಾಂಜನೇಯನಿಗೆ ಹೆಚ್.ವಿಶ್ವನಾಥ್ ಪೂಜೆ ಸಲ್ಲಿಸಿದರು.

ನಂತರ ಹುಣಸೂರಿನ ನಗರಸಭೆ ಆವರಣದಲ್ಲಿ ಸಚಿವ ಶ್ರೀ ರಾಮುಲು ಸಂಸದರಾದ ಶ್ರೀನಿವಾಸ ಪ್ರಸಾದ್ ,ಪ್ರತಾಪ್ ಸಿಂಹ ಸೇರಿದಂತೆ ಇನ್ನಿತರ ನಾಯಕರೊಂದಿಗೆ ಸಭೆಯಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಸಚಿವ ಶ್ರೀ ರಾಮುಲು ಸಮ್ಮುಖದಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಎಸಿ ಕಛೇರಿ ಆಗಮಿಸಿ ಹೆಚ್.ವಿಶ್ವನಾಥ್ ಉಮೇದುವಾರಿಕೆ ಸಲ್ಲಿಸಿದರು.

Key words: H. Vishwanath- nomination file-hunsur – BJP candidate.