ಮಂಗಳೂರು,ನವೆಂಬರ್7,2026 (www.justkannada.in): ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ಕಿತ್ತುಕೊಂಡ ಆರೋಪದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರ ಬಂಧಿಸಲಾಗಿದೆ.
ಹೊಯ್ಸಳ ಸಿಬ್ಬಂದಿಯಾದ ಶಿವರಾಜ್ ಹಿರಣ್ಣ ಬೆನ್ನಿ ಬಂಧಿತ ಪೊಲೀಸರು. ವಿಟ್ಲ ನಿವಾಸಿ ರವಿರಾಜ್ ದೂರಿನ ಮೇರೆಗೆ ಪೊಲೀಸರ ವಿರುದ್ದ ಎಫ್ ಐಆರ್ ದಾಖಲಾಗಿದೆ. ರವಿರಾಜ್ ಮಂಗಳೂರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದು ಬಂಧಿತ ಪೊಲೀಸ್ ಸಿಬ್ಬಂದಿಗಳು ರವಿರಾಜ್ ಮೇಲೆ ಮಾಡಿ ಹಣ ಕಿತ್ತುಕೊಂಡ ಆರೋಪ ಕೇಳಿ ಬಂದಿದೆ.
ಬಂಧಿತ ಇಬ್ಬರು ಪಾಂಡೇಶ್ವರ ಠಾಣೆಯ ಸಿಬ್ಬಂದಿ ಎನ್ನಲಾಗಿದೆ.







