ನವದೆಹಲಿ,ನವೆಂಬರ್,6,2026 (www.justkannada.in): ಈ ಬಾರಿ ಮಳೆರಾಯ ಕೈಕೊಟ್ಟ ಹಿನ್ನೆಲೆಯಲ್ಲಿ ಜಲಾಶಯಗಳು ಭರ್ತಿಯಾಗದೇ ತೀವ್ರ ಬರಗಾಲ ಆವರಿಸಿದ್ದು ಈ ಮಧ್ಯೆಯೂ ತಮಿಳುನಾಡಿಗೆ ಪದೇ ಪದೇ ನೀರು ಹರಿಸುವಂತೆ ಆದೇಶ ನೀಡುವ ಮೂಲಕ ಕರ್ನಾಟಕ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಶಾಕ್ ನೀಡುತ್ತಿದೆ.
ಇಂದು ನವದೆಹಲಿಯಲ್ಲಿ ನಡೆದ ಸಿಡಬ್ಲ್ಯುಆರ್ ಸಿ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳವರೆಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕೆಆರ್ ಎಸ್, ಕಬಿನಿ ಜಲಾಶಯಗಳು ಭರ್ತಿಯಾಗಿಲ್ಲ. ಪ್ರತಿದಿನ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಭರ್ತಿಯಾಗಿದ್ದ ಕಬಿನ ಜಲಾಶಯ ನೀರಿನ ಮಟ್ಟ ಕುಸಿದಿದೆ. ಹಾಗೆಯೇ ಕೆಆರ್ ಎಸ್ ಜಲಾಶಯದಲ್ಲೂ ನೀರಿನ ಮಟ್ಟ 100 ಅಡಿಗೆ ಕುಸಿದಿದ್ದು ಕುಡಿಯುವ ನೀರಿಗೂ ಸಂಕಷ್ಟ ತಲೆದೂರುವ ಪರಿಸ್ಥಿತಿ ಎದುರಾಗಿದೆ.











