Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Crime ಒಂದೇ ಕುಟುಂಬದ 7 ಜನರ ಹತ್ಯೆ: ಆರೋಪಿಯ ಬಂಧನ

ಒಂದೇ ಕುಟುಂಬದ 7 ಜನರ ಹತ್ಯೆ: ಆರೋಪಿಯ ಬಂಧನ

ಒಂದೇ ಕುಟುಂಬದ 7 ಜನರ ಹತ್ಯೆ: ಆರೋಪಿಯ ಬಂಧನ

ಬೆಂಗಳೂರು, ನವೆಂಬರ್,6,2026 (www.justkannada.in): ವ್ಯಕ್ತಿಯೊಬ್ಬರ ತನ್ನ ಪತ್ನಿ ಸೇರಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇಂದುಶೇಖರ್‌  7 ಮಂದಿಯನ್ನು ಕೊಲೆ ಮಾಡಿರುವ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.  ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ . ಬಳಿಕ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಒಂದೇ ಕುಟುಂಬದ 7 ಜನರ ಹತ್ಯೆ: ಆರೋಪಿಯ ಬಂಧನ

ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ . ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದುದೂ ಆರೋಪಿಗೆ ಸಹಿಸಲಾಗುತ್ತಿರಲಿಲ್ಲ ಎನ್ನಲಾಗಿದೆ.ಒಂದೇ ಕುಟುಂಬದ 7 ಜನರ ಹತ್ಯೆ: ಆರೋಪಿಯ ಬಂಧನ

ಪ್ರಕರಣದ ಗಂಭೀರತೆ ಪರಿಗಣಿಸಿ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ವಿಶೇಷ ತಂಡವನ್ನು ರಚಿಸಲಾಗಿದ್ದು ನಂದಿಬೆಟ್ಟದ ಸುತ್ತಮುತ್ತ ಎಸೆಯಲಾದ  ಮೃತದೇಹಗಳ ಪತ್ತೆಗೆ ಹಾಗೂ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.7 members jk02_new jk02 new

 

Murder, 7 members, single family, Accused, arrested

English Summary
Title

Bengaluru Mass Murder: Cab Driver Arrested After Killing Seven In-Laws

Short Description
Bengaluru police have arrested a 45-year-old cab driver, Indu Shekhar, for the horrific mass murder of seven members of his wife’s family. Driven by long-standing marital disputes and resentment over in-law interference, the accused meticulously planned the crime over months. Shekhar lured the victims—including his wife, mother-in-law, siblings-in-law, and a seven-year-old nephew—to his Rajajinagar residence. He spiked their food before bludgeoning them to death. The serial killings unraveled after a missing persons complaint led to his confession. Police have recovered the child's body near Nandi Hills and are searching for the remaining victims.
Keywords
Murder, 7 members, single family, Accused, arrested