Thursday, September 24, 2026

BDA Apartments

Home Front Page ಕಾವೇರಿ ನದಿ ನೀರು ವಿವಾದ: ವಾರದಲ್ಲಿ ಅಫಿಡವಿಟ್‌ ಸಲ್ಲಿಸಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಕಾವೇರಿ ನದಿ ನೀರು ವಿವಾದ: ವಾರದಲ್ಲಿ ಅಫಿಡವಿಟ್‌ ಸಲ್ಲಿಸಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ನವದೆಹಲಿ,ಸೆಪ್ಟಂಬರ್‌,24,2026 (www.justkannada.in): ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ  ಮುಂಗಾರು ಮಳೆ ಕೊರತೆ, ಒಳಹರಿವಿನ ಪ್ರಮಾಣ ಇಳಿಮುಖ, ನೀರಿನ ಸಂಗ್ರಹ ಮಟ್ಟ ಕುಸಿತದ ಬಗ್ಗೆ ಮನವರಿಕೆ ಮಾಡಿದ ಕರ್ನಾಟಕ ಸರ್ಕಾರಕ್ಕೆ ಒಂದು ವಾರದಲ್ಲಿ ಅಫಿಡವಿಟ್‌ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುತ್ತಿಲ್ಲವೆಂದು ಆಕ್ಷೇಪಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ಇಂದು  ವಿಚಾರಣೆ ನಡೆಸಿತು.Cauvery rivȩr caveri

ಈ ವೇಳೆ ವಾದ ಮಂಡಿಸಿದ ತಮಿಳುನಾಡು , ಸಿಡಬ್ಲ್ಯುಎಂಎ ಆದೇಶವನ್ನ ಕರ್ನಾಟಕ ಪಾಲಿಸುತ್ತಿಲ್ಲ ಎಂದಿತು. ಇದಕ್ಕೆ ಪ್ರತಿಯಾಗಿ ವಾದಿಸಿದ ಕರ್ನಾಟಕ ರಾಜ್ಯದಲ್ಲಿ ಮುಂಗಾರು ವಿಫಲವಾಗಿದೆ ಬರ ಘೋಷಣೆಯಾಗಿದೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಡ್ಯಾಂಗಳಲ್ಲಿ ನೀರಿನ ಸಂಗ್ರಹ ಮಟ್ಟ ತೀರ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 81 ಟಿಎಂಸಿ ನೀರಿತ್ತು. ಈ ವರ್ಷ ನೀರಿನ ಒಳಹರಿವಿನಲ್ಲಿ ಭಾರೀ ಕೊರತೆ ಇದೆ  ಎಂದು ನೀರಿನ ಕೊರತೆ ಬಗ್ಗೆ ಮನವರಿಕೆ ಮಾಡಿ ತಮಿಳುನಾಡು ಅರ್ಜಿ ವಜಾಗೊಳಿಸಲು ಮನವಿ ಮಾಡಿತು.Cauvery rivȩr jk02_new jk02 new

ಕರ್ನಾಟಕದ ವಾದ ಆಲಿಸಿದ  ಸುಪ್ರೀಂಕೋರ್ಟ್‌  ಒಂದು ವಾರದಲ್ಲಿ ಅಫಿಡವಿಟ್‌ ಸಲ್ಲಿಸಲು ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಆಕ್ಟೋಬರ್‌ 12ಕ್ಕೆ ಮುಂದೂಡಿಕೆ ಮಾಡಿತು.

 

English Summary
Title

Cauvery Water Dispute: SC Directs Karnataka & TN to File Affidavits

Short Description
The Supreme Court of India has directed Karnataka and Tamil Nadu to file fresh status reports and affidavits outlining real-time water levels in the ongoing Cauvery River Water Dispute. While Karnataka confirmed compliance with the Cauvery Water Management Authority (CWMA) orders, Tamil Nadu filed a counter-affidavit seeking the immediate release of its pro-rata water share. Meanwhile, the SC bench consisting of Justices Vikram Nath and Sandeep Mehta strictly dismissed third-party petitions trying to alter the existing interstate water-sharing arrangement, stating it would trigger endless litigation.
Keywords
Cauvery rivȩr, watȩr, dispute, Supreme Court, directs, Karnataka, affidavit