Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Front Page ಸಚಿವ ಶಿವಲಿಂಗೇಗೌಡ ವಿರುದ್ದ ಲೋಕಾಯುಕ್ತಕ್ಕೆ ದೂರು.

ಸಚಿವ ಶಿವಲಿಂಗೇಗೌಡ ವಿರುದ್ದ ಲೋಕಾಯುಕ್ತಕ್ಕೆ ದೂರು.

ಮೈಸೂರು,ಸೆಪ್ಟಂಬರ್‌,22,2026 (www.justkannada.in):  ಹಾಸನ‌ ಜಿಲ್ಲೆಯ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ಕುರಿತು ಯಡವಟ್ಟಿನ ಹೇಳಿಕೆಯಿಂದ ಹುಟ್ಟಿಕೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ  ಅಬಕಾರಿ ಸಚಿವ ಶಿವಲಿಂಗೇಗೌಡ ವಿರುದ್ದ ದೂರು ದಾಖಲಾಗಿದೆ.

ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆಯಿಂದ ಸಚಿವ ಶಿವಲಿಂಗೇಗೌಡರ ವಿರುದ್ದ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕೆಲಸ ಆದ ನಂತರ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ ಎಂದು  ಸಚಿವ ಶಿವಲಿಂಗೇ ಗೌಡ ಅವರು ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.ಸಚಿವ ಶಿವಲಿಂಗೇಗೌಡ ವಿರುದ್ದ ಲೋಕಾಯುಕ್ತಕ್ಕೆ ದೂರು lokayukta

ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾದ ನಂತರ ಮಾತನಾಡಿದ ವಾಯ್ಸ್ ಆಫ್ ಪೀಪಲ್ ಮುಖ್ಯಸ್ಥ ವಸಂತ ರಾವ್ ಚೌಹಾಣ್, ಸಚಿವರು ನೇರವಾಗಿ ಲಂಚ ನೀಡುವಂತೆ ಜನರಿಗೆ ಸಲಹೆ ಕೊಟ್ಟಿದ್ದಾರೆ. ಇವರು ಸಚಿವರಾಗಿರಲು ಅನ್ ಫಿಟ್.! ಅವರು ಈ ಕೂಡಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಾರ್ವಜನಿಕವಾಗಿ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ದೂರು ಸಲ್ಲಿಸುತ್ತೇವೆ. ಇವರ ವಿರುದ್ದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಭಿಯಾನ ಮಾಡುತ್ತೇವೆ ಎಂದರು.ಸಚಿವ ಶಿವಲಿಂಗೇಗೌಡ ವಿರುದ್ದ ಲೋಕಾಯುಕ್ತಕ್ಕೆ ದೂರು jk02

Key words: Complaint, filed, with, Lokayukta, against, Minister, Shivalinge Gowda.