Tuesday, September 22, 2026

BDA Apartments

Home Front Page ಮೈಸೂರು ವಿವಿಯಲ್ಲಿ ₹150 ಕೋಟಿ ಟೆಂಡರ್ ಅಕ್ರಮ ಆರೋಪ: ಆನ್‌ಲೈನ್ ಶಿಕ್ಷಣ ಒಪ್ಪಂದದ ಬಗ್ಗೆಯೂ ತನಿಖೆಗೆ...

ಮೈಸೂರು ವಿವಿಯಲ್ಲಿ ₹150 ಕೋಟಿ ಟೆಂಡರ್ ಅಕ್ರಮ ಆರೋಪ: ಆನ್‌ಲೈನ್ ಶಿಕ್ಷಣ ಒಪ್ಪಂದದ ಬಗ್ಗೆಯೂ ತನಿಖೆಗೆ ಆಗ್ರಹ.

 

ಮೈಸೂರು, ಸೆ.21: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು ₹150 ಕೋಟಿಗೂ ಅಧಿಕ ಮೌಲ್ಯದ ಟೆಂಡರ್‌ಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಹಾಗೂ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಒಪ್ಪಂದಗಳಲ್ಲಿ ನಿಯಮಬಾಹಿರ ವ್ಯವಹಾರಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಟಿ.ಆರ್. ಚಂದ್ರಶೇಖರ್ ಅವರು ಈ ಕುರಿತು ದಾಖಲೆ ಸಹಿತ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ದೂರು ಸಲ್ಲಿಸಿದ್ದು, ಪ್ರಕರಣದ ಬಗ್ಗೆ ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Mysore University tender scamUniversity of Mysore irregularitiesDr T R jk02_new jk02 new

ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ವಿವಿಧ ಟೆಂಡರ್‌ಗಳಲ್ಲಿ ಸುಮಾರು ₹150 ಕೋಟಿಗೂ ಅಧಿಕ ಮೊತ್ತದ ವ್ಯವಹಾರಗಳಿದ್ದು, ಅವುಗಳ ಪ್ರಕ್ರಿಯೆ ಹಾಗೂ ಅನುಮೋದನೆಗಳಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

Mysore University tender scamUniversity of Mysore irregularitiesDr T R Chandrashekar complaintHigher Education Minister Basavaraj RayareddyUniversity online education agreements...

ಇದೇ ವೇಳೆ, University18 ಜೊತೆಗಿನ ಆನ್‌ಲೈನ್ ಶಿಕ್ಷಣ ಒಪ್ಪಂದದಲ್ಲಿಯೂ ಗಂಭೀರ ನಿಯಮಬಾಹಿರ ವ್ಯವಹಾರಗಳ ಆರೋಪ ಮಾಡಲಾಗಿದ್ದು, ಒಪ್ಪಂದದ ಷರತ್ತುಗಳು, ಶುಲ್ಕ ಸಂಗ್ರಹ, ವಿಶ್ವವಿದ್ಯಾನಿಲಯದ ಆದಾಯ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಅಂಶಗಳ ಕುರಿತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ರಾಜ್ಯಪಾಲರು, ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು, ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಈಗಾಗಲೇ ಸಮಗ್ರ ದೂರು ಸಲ್ಲಿಸಲಾಗಿದೆ ಎಂದು ಡಾ. ಚಂದ್ರಶೇಖರ್ ತಿಳಿಸಿದ್ದಾರೆ.

Mysore University tender scamUniversity of Mysore irregularitiesDr T R tr chandrashekar

ವಿಶ್ವವಿದ್ಯಾನಿಲಯದ ಆಡಳಿತಾತ್ಮಕ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಖಚಿತಪಡಿಸುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಅವರು, ಅಗತ್ಯವಿದ್ದಲ್ಲಿ ಹೆಚ್ಚಿನ ದಾಖಲೆ ಹಾಗೂ ಮಾಹಿತಿಯನ್ನು ಒದಗಿಸುವುದಾಗಿ ಹೇಳಿದ್ದಾರೆ.

key words:

  • Mysore University tender scam
  • University of Mysore irregularities
  • Dr T R Chandrashekar complaint
  • Higher Education Minister Basavaraj Rayareddy
  • University online education agreements
  • ₹150 crore varsity tender probe
English Summary
Title

Mysore University Tender Scam: Rs 150 Cr Irregularities Alleged

Short Description
Allegations of a massive ₹150 crore tender scam have emerged at the University of Mysore, involving major irregularities in approvals and online education agreements. Dr. T.R. Chandrashekar, a prominent Mysore University Syndicate Member, has formally submitted a documentary complaint to Higher Education Minister Basavaraj Rayareddy. The complaint demands a comprehensive, independent probe into the university's various high-value procurement procedures. It highlights widespread violations of official guidelines, stressing the urgent need to verify if mandatory legal frameworks and protocol regulations were followed during the multi-crore tender approval process.
Keywords
Mysore University tender scamUniversity of Mysore irregularitiesDr T R Chandrashekar complaintHigher Education Minister Basavaraj RayareddyUniversity online education agreements₹150 crore varsity tender probe