Tuesday, September 22, 2026

BDA Apartments

Tragic Raichur Accident Two Boys BDA JK_Adv BDA Adv
Home Front Page ಮೈಸೂರು ದಸರಾ: ಅರಮನೆ ಖಾಸಗಿ ಕಾರ್ಯಕ್ರಮಗಳ ಕುರಿತು ವಿವರ ನೀಡಿದ ಪ್ರಮೋದಾದೇವಿ ಒಡೆಯರ್

ಮೈಸೂರು ದಸರಾ: ಅರಮನೆ ಖಾಸಗಿ ಕಾರ್ಯಕ್ರಮಗಳ ಕುರಿತು ವಿವರ ನೀಡಿದ ಪ್ರಮೋದಾದೇವಿ ಒಡೆಯರ್

ಮೈಸೂರು,ಸೆಪ್ಟಂಬರ್‌,22,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಮೈಸೂರು ಅರಮನೆಯಲ್ಲಿ ಜರುಗುವ ಖಾಸಗಿ ಕಾರ್ಯಕ್ರಮಗಳ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಹಿತಿ ಹಂಚಿಕೊಂಡಿದ್ದಾರೆ,

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಅಕ್ಟೋಬರ್ 5 ರ ಬೆಳಗ್ಗೆ 7.30 ನವಗ್ರಹ ಹೋಮಸ್ಥಳ ಶುದ್ದಿಕರಣ ನಡೆಯಲಿದ್ದು 10 ರಿಂದ 10.20 ಗಂಟೆಗೆ ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ನಂತರ ಅಕ್ಟೊಬರ್ 11 ಭಾನುವಾರ ಬೆಳಿಗ್ಗೆ 6ರಿಂದ 7.12ನಿಮಿಷಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ನೆರವೇರಲಿದ್ದು, 8.35ರಿಂದ 9.05ರವರೆಗೆ ಕಂಕಣಧಾರಣೆ, 11.45 ರಿಂದ 12.05ರವರೆಗೆ ಸಿಂಹಾಸನರೋಹಣ, 1.40ರಿಂದ 2.05ಕ್ಕೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಕರೆ ತಂದು ವಿಜಯದಶಮಿವರೆಗೂ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು

ಅಕ್ಟೊಬರ್ 16 ಶುಕ್ರವಾರದಂದು  ಬೆಳಿಗ್ಗೆ 10.10ರಿಂದ 10.30ರವರೆಗೆ ಸರಸ್ವತಿ ಪೂಜೆ ನೆರವೇರಲಿದೆ. ಅಕ್ಟೋಬರ್ 17 ಶನಿವಾರ ಸಂಜೆ ಖಾಸಗಿ ದರ್ಬಾರ್ ಬಳಿಕ ಕಾಳ ರಾತ್ರಿ ಪೂಜೆ ಸಲ್ಲಸಲಾಗುವುದು, ಅಕ್ಟೋಬರ್ 18 ಭಾನುವಾರ ದುರ್ಗಾಷ್ಟಮಿ ಪೂಜೆ, ಅಕ್ಟೋಬರ್ 20 ಮಂಗಳವಾರ ಮಹಾನವಮಿ ನಡೆಯಲಿದೆ.  ಬೆಳಿಗ್ಗೆ 6ಗಂಟೆಗೆ ಚಂಡಿ ಹೋಮ ನೆರವೇರಲಿದ್ದು, ಕೋಡಿ ಸೋಮೇಶ್ವರ ದೇವಾಲಯಕ್ಕೆ ಅರಮನೆಯಿಂದ ಖಾಸಗಿ ಆಯುಧಗಳ ರವಾನೆ ಮಾಡಲಾಗುತ್ತದೆ.  ಕೋಡಿ ಸೋಮೇಶ್ವರ ದೇವಾಲಯದಲ್ಲಿ ಎಣ್ಣೆ ಪೂಜೆ ಬಳಿಕ ಕಲ್ಯಾಣ ಮಂಟಪಕ್ಕೆ ಖಾಸಾ ಆಯುಧಗಳು ವಾಪಾಸ್ಸಾಗಲಿವೆ. ಬೆಳಿಗ್ಗೆ 11.32ರಿಂದ 11.52ರ ಒಳಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದ್ದು, ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳು, ವಾಹನಗಳು, ಅರಮನೆಯ ಕತ್ತಿ, ಈಟಿ, ಗುರಾಣಿ, ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.Mysuru Dasara mysore dasara

ಅಕ್ಟೊಬರ್ 21ರಂದು ವಿಜಯದಶಮಿಯಂದು ಬೆಳಿಗ್ಗೆ 8ಗಂಟೆಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಹಸು, ಕುದುರೆ, ಒಂಟೆ ಆಗಮಿಸಲಿವೆ. 8.15ಕ್ಕೆ ಕಲ್ಯಾಣ ಮಂಟದಲ್ಲಿ ಉತ್ತರ ಪೂಜೆ ಆರಂಭವಾಗಲಿದ್ದು ಬೆಳಿಗ್ಗೆ 9.30 ರಿಂದ 10.10ರ ಒಳಗೆ ವಿಜಯಯಾತ್ರೆ ಶಮಿ ಪೂಜೆ ನೆರವೇರಲಿದೆ. ವಿಜಯಯಾತ್ರೆ ಬಳಿಕ ವಾಣಿವಿಲಾಸ ದೇವರ ಕೋಣೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತದೆ ಬಳಿಕ ಚಾಮುಂಡೇಶ್ವರಿ ವಿಗ್ರಹವನ್ನ ಸ್ವಸ್ಥಾನ ಚಾಮುಂಡಿ ತೊಟ್ಟಿಗೆ ತಲುಪಿಸಿ ಶರನವರಾತ್ರಿ ಸಂಪನ್ನವಾಗಲಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಿಳಿಸಿದರು.Mysuru Dasara jk02

 

English Summary
Title

Mysuru Dasara 2026: Schedule, Palace Events & Jamboo Savari Guide

Short Description
Mysuru Dasara 2026 runs from October 11 to 21, showcasing Karnataka’s grandest cultural heritage. Curated by Rajamata Pramodadevi Wadiyar, the iconic Mysuru Palace events feature the royal Private Durbar starting October 11, Ayudha Puja on October 20, and sacred rituals. The city will illuminate with 100,000 bulbs alongside the Yuva Dasara music festival, flower shows, and food melas. The grand finale on Vijayadashami (October 21) features the legendary Jamboo Savari procession, where a lead elephant carries the 750kg Golden Howdah from the palace to Bannimantap, concluding with a spectacular torchlight parade and drone show.
Keywords
Mysuru Dasara, Pramodadevi Wadiyar, details, palace, events, Vijayadashami