ಬೆಂಗಳೂರು,ಸೆಪ್ಟಂಬರ್,21,2026 (www.justkannada.in): ಬಿಜೆಪಿಯವರು ಕಾಗದ, ಮೊಬೈಲ್ ನೋಡದೇ ವಂದೇ ಮಾತರಂ ಹಾಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ಕಾಲೆಳೆದರು.
ಇಂದಿನಿಂದ ಮೂರುದಿನಗಳ ಕಾಲ ವಿಶೇಷ ಅಧಿವೇಶನ ಆರಂಭವಾಗಿದ್ದು ಸದನದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಪೂರ್ಣವಾಗಿ ವಂದೇ ಮಾತರಂ ಹಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡೋಕೆ ಬರಲ್ಲ. ಅದರ ಪದಗಳ ಉಚ್ಚಾರಣೆ ಬರಲ್ಲ. ಯಾವ ರೀತಿ ಹೇಳಬೇಕು. ಪದ ಹೇಗೆ ಬಳಸಬೇಕು ಗೊತ್ತಿಲ್ಲ. ಬಿಹೆಪಿಯವರು ಕಾಗದ ಮೊಬೈಲ್ ನೋಡದೇ ವಂದೇ ಮಾತರಂ ಹಾಡಲಿ ಎಂದು ತಿರುಗೇಟು ನೀಡಿದರು.
ಬರದ ವಿಚಾರದಲ್ಲಿ ಶಾಸಕ ಹೆಚ್.ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ. ನಮ್ಮ ಹಿರಿಯ ನಾಯಕರು ಏಕೆ ಹಾಗೆ ಮಾತನಾಡಿದರೋ ಗೊತ್ತುಲ್ಲ. ಯಾಕೆಂದರೆ ಸಾಹೇಬರಿಗೆ ಸಂಪೂರ್ಣ ಮಾಹಿತಿ ಇದೆ. ಯಾವ ರೀತಿ ಬರ ಘೋಷಣೆ ಆಗುತ್ತೆ ಎಂದು ಗೊತ್ತಿದೆ. ಕೇಂದ್ರ, ರಾಜ್ಯಗಳ ಸರಕಾರಗಳ ಪಾತ್ರವೇನು ಎಂಬುದು ಗೊತ್ತಿದೆ ಎಂದು ತಿಳಿಸಿದರು.
Key words: BJP members, ‘Vande Mataram, Home Minister, Priyank Kharge.






