Wednesday, September 2, 2026

BDA Apartments

Home Front Page ಮರಿ ಅಶೋಕ್ ಏಕೆ ಗಣವೇಶ ಧರಿಸಿಲ್ಲ?  ಇನ್ನೂ ಧರ್ಮ ರಕ್ಷಕನಾಗಿ ಯಾಕೆ ಆಗಿಲ್ಲ? ಸಚಿವ ಪ್ರಿಯಾಂಕ್...

ಮರಿ ಅಶೋಕ್ ಏಕೆ ಗಣವೇಶ ಧರಿಸಿಲ್ಲ?  ಇನ್ನೂ ಧರ್ಮ ರಕ್ಷಕನಾಗಿ ಯಾಕೆ ಆಗಿಲ್ಲ? ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು,ಸೆಪ್ಟಂಬರ್,2,2026 (www.justkannada.in): ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮುಂದುವರೆಸಿದ್ದು ಟ್ವೀಟ್ ಮಾಡಿ ಕೆಲ ಪ್ರಶ್ನೆಗಳನ್ನಾಕಿ ಕುಟುಕಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್  ಬಗ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬ ಚಿಂತೆಗೀಡಾಗಿದ್ದೀರಿ.  ಆದರೆ ನೀವು ಉತ್ತರಿಸಬೇಕಾದ ನಿಜವಾದ ಪ್ರಶ್ನೆಗಳಿವೆ.

ಮರಿ ಅಶೋಕ್ ಏಕೆ ಗಣವೇಶ ಧರಿಸಿಲ್ಲ?  ಮರಿಅಶೋಕ್ ಏಖೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ? ಮರಿ ಅಶೋಕ್ ಇನ್ನೂ ಧರ್ಮ ರಕ್ಷಕನಾಗಿ ಯಾಕೆ ಆಗಿಲ್ಲ? ಹಿರಿ ಅಶೋಕ್ ಅವರು ಈ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಯಾವಾಗ ಮಾತನಾಡುತ್ತಿರಿ?  ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ?  ಕೆಪಿಎಸ್ ಸಿ ಸದಸ್ಯ ಅಧ್ಯಕ್ಷರನ್ನ ನೇಮಿಸಿದ್ದು ಬಿಜೆಪಿ ನಾಯಕರು.  ಎಷ್ಟು ಹಣ ಸಂದಾಯವಾಗಿದೆ ಎಂದು ಯಾವಾಗ ಮಾತನಾಡುತ್ತೀರಿ  ನಿಮ್ಮ ಪಕ್ಷಕ್ಕೆ ಸೇರಿದವರ ಚಿತ್ರಗಳ ಬಗ್ಗೆ ಯಾವಾಗ ಮಾತನಾಡತ್ತೀರಿ? ಎಂದು  ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: R.Ashok, RSS, Minister, Priyank Kharge