ಬೆಳಗಾವಿ, ಅಕ್ಟೋಬರ್,17,2026 (www.justkannada.in) ಕಬ್ಬಿಗೆ ಎಂಎಸ್ ಪಿ ದರ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಕಿತ್ತೂರಿನ ಅಂಬಡಗಟ್ಟಿಯಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದು ರೈತರ ಬೇಡಿಕೆ ಆಲಿಸಲಿದ್ದಾರೆ. ಸಿಎಂಗೆ ಉತ್ತರ ಕರ್ನಾಟಕ ಶಾಸಕರು ಸಚಿವರು ಸಾಥ್ ನೀಡಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ರೈತರು ನಮ್ಮವರು ರೈತರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಕಳೆದ 10 ರಿಂದ 12 ವರ್ಷಗಳಿಂದ ಸಮಸ್ಯೆ ನಡೆಯುತ್ತಿದೆ ಸಕ್ಕರೆ ಬೆಲೆ ಜಾಸ್ತಿ ಮಾಡೋಕಾಗಿಲ್ಲ. ಕಾರ್ಖಾನೆಯವರೊಂದಿಗೆ ಮಾತನಾಡಿ ನಾನು ತಿಳಿಸುತ್ತೇನೆ ಮಧ್ಯಾಹ್ನ ದೆಹಲಿಗೆ ಸರ್ಕಾರದ ಪ್ರತಿನಿಧಿಗಳನ್ನ ಕಳಿಸಲಾಗಿದೆ. ದೆಹಲಿಯಲ್ಲಿಯೂ ಸಹ ಮಾತುಕತೆ ನಡೆದಿದೆ. ಕೇಂದ್ರ ಸರ್ಕಾರವೂ ಕೂಡ ಒಂದು ಸಮಿತಿ ರಚನೆ ಮಾಡಿದೆ. ಕಬ್ಬಿನ ದರ ಸಮಸ್ಯೆ ಇದು ಒಂದು ರಾಜ್ಯದ ವಿಚಾರವಲ್ಲ. ಈ ಬಗ್ಗೆ ಕರ್ನಾಟಕ ಅಷ್ಟೇ ತೀರ್ಮಾನ ಮಾಡಲು ಆಗಲ್ಲ ಕೇಂದ್ರದವರು ಬೇರೆ ಬೇರೆ ರಾಜ್ಯ ದವರ ಜತೆ ಚರ್ಚಿಸುತ್ತಿದ್ದಾರೆ ಎಂದರು.






