ರಾಯಚೂರು,ಸೆಪ್ಟಂಬರ್,2,2026 (www.justkannada.in): ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರಿನ ಲಿಂಗಸೂಗೂರಿನಿಂದ ಬಳ್ಳಾರಿ ಚಲೋ ಪಾದಯಾತ್ರೆ ನಡೆಸುತ್ತಿದ್ದು ಈ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸವಾಲೊಂದನ್ನ ಹಾಕಿದ್ದಾರೆ.
ಪಾದಯಾತ್ರೆಯಲ್ಲಿ ಮಾತನಾಡಿರುವ ಬಿವೈ ವಿಜಯೇಂದ್ರ, ಮೊದಲ ದಿನದ ಪಾದಯಾತ್ರೆ ಬಿಸಿ ಸರ್ಕಾರಕ್ಕೆ ತಟ್ಟಿದೆ. ಸಿಎಂ ಬುಡಕ್ಕೆ ಬರುತ್ತೆ ಅಂತಾ ನಾಗೇಂದ್ರ ಅವರ ರಾಜೀನಾಮೆ ಪಡೆದರು ಪಾದಯಾತ್ರ ನೋಡಿ ಎಸಿ ರೂಮ್ ಬಿಟ್ಟು ಬರ ವೀಕ್ಷಣೆಗೆ ಬಂದರು. ಇದು ನಮ್ಮ ಹೋರಾಟಕ್ಕೆ 2ನೇ ಜಯ ಎಂದರು.
ಸಿಎಂಗೆ ಸವಾಲು ಹಾಕುತ್ತೀನಿ. ದಲಿತರಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಿ ಇಲ್ಲಿದ್ದರೇ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯದ ಎದುರು ಬನ್ನಿ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: Valmiki Development, Corporation, BY Vijayendra, challenges, CM,DK Shivakumar







