Wednesday, September 2, 2026

BDA Apartments

Home Front Page ನೆರೆ-ಭೂಕುಸಿತದ ನಡುವೆ ಪತ್ರಕರ್ತರ ಪರದಾಟ; ಅಪರಿಚಿತರ ಮಾನವೀಯತೆ ಮರೆಯಲಾಗದ ಅನುಭವ

ನೆರೆ-ಭೂಕುಸಿತದ ನಡುವೆ ಪತ್ರಕರ್ತರ ಪರದಾಟ; ಅಪರಿಚಿತರ ಮಾನವೀಯತೆ ಮರೆಯಲಾಗದ ಅನುಭವ

ಕಠ್ಮಂಡು,ಸೆಪ್ಟಂಬರ್,2,2026 (www.justkannada.in): ಭಾರಿ ಮಳೆ, ಪ್ರವಾಹ ಹಾಗೂ ನಿರಂತರ ಭೂಕುಸಿತದಿಂದ ನೇಪಾಳದ ನುವಾಕೋಟ್ ಮತ್ತು ರಸುವಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣಗೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿರುವ ನಡುವೆಯೇ, ನೆಲಮಟ್ಟದ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರಿಗೂ ಸಂಕಷ್ಟ ಎದುರಾಗಿದೆ.

ತಮಿಳುನಾಡಿನ ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್ ಪತ್ರಿಕೆ ವರದಿಗಾರ ಕೃಷ್ಣ ಚೈತನ್ಯ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಕಠಿಣ ಅನುಭವವನ್ನು ಹಂಚಿಕೊಂಡಿದ್ದಾರೆ.

ಸ್ಥಳೀಯ ಪತ್ರಕರ್ತ ಜೀವನ್ ಶರ್ಮಾ ಅವರೊಂದಿಗೆ ತಾವು ಕೂಡ ಅಕ್ಷರಶಃ ದಾರಿ ಮಧ್ಯೆ ಸಿಲುಕಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಭೂಕುಸಿತಗಳು ಮುಂದುವರಿಯುತ್ತಿದ್ದ ಹಿನ್ನೆಲೆಯಲ್ಲಿ ಪರ್ವತ ಪ್ರದೇಶಗಳ ರಸ್ತೆಗಳು ಅಪಾಯಕಾರಿಯಾಗಿದ್ದವು. ಹೀಗಾಗಿ, ರಾತ್ರಿ ಬೈಕ್‌ ನಲ್ಲಿ ಕಠ್ಮಂಡುವಿಗೆ ವಾಪಸ್ ತೆರಳುವುದು ಸಾಧ್ಯವೇ ಇರಲಿಲ್ಲ.

ಕೊನೆಗೆ ಕೆಲ ಗಂಟೆಗಳ ಕಾಲ ಕಾರು ರಿಪೇರಿ ಮಾಡುವ ವರ್ಕ್‌ ಶಾಪ್‌ವೊಂದರಲ್ಲಿ ಆಶ್ರಯ ಪಡೆದಿದ್ದರು. ಬಳಿಕ ಅಲ್ಲಿಗೆ ಬಂದ ಕೆಲ ದಯಾಳು ಚಾಲಕರು ಅವರಿಗೆ ತಮ್ಮ ಬಳಿ ಆಶ್ರಯ ಕಲ್ಪಿಸಿ, ಅತ್ಯಗತ್ಯವಾಗಿದ್ದ ಕೆಲ ಗಂಟೆಗಳ ವಿಶ್ರಾಂತಿಗೂ ಅವಕಾಶ ಮಾಡಿಕೊಟ್ಟರು. ಇಂತಹ ಕ್ಷಣಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ” ಎಂದು ಕೃಷ್ಣ ಚೈತನ್ಯ ತಮ್ಮ ಅನುಭವವನ್ನು ಬಣ್ಣಿಸಿದ್ದಾರೆ.

ಅನಿಶ್ಚಿತತೆ, ದೈಹಿಕ ಆಯಾಸ ಮತ್ತು ಕಠಿಣ ಪರಿಸ್ಥಿತಿಗಳ ನಡುವೆಯೂ ನೇಪಾಳದಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ಅರ್ಥಪೂರ್ಣವಾಗಿತ್ತು ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಸಾಮಾನ್ಯ ಜನರು ತೋರಿದ ಆತ್ಮೀಯತೆ, ಸಹಾನುಭೂತಿ ಮತ್ತು ಉದಾರತೆಯನ್ನು ಅವರು ಮೆಚ್ಚಿಕೊಂಡಿದ್ದಾರೆ.

ಪ್ರವಾಹದ ಭೀಕರತೆಯಿಂದ ಪ್ರೀತಿ ಪಾತ್ರರನ್ನು, ಮನೆಗಳನ್ನು ಹಾಗೂ ಜೀವನೋಪಾಯವನ್ನು ಕಳೆದುಕೊಂಡ ಪ್ರತಿಯೊಬ್ಬರ ಬಗ್ಗೆಯೂ ತಮ್ಮ ಹೃದಯ ಮಿಡಿಯುತ್ತಿದೆ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪದ ನಡುವೆಯೂ ಅಪರಿಚಿತರಾಗಿ ಬಂದವರಿಗೆ ನೆರವಿನ ಹಸ್ತ ಚಾಚಿದ ಸಾಮಾನ್ಯ ಜನರ ಮಾನವೀಯತೆ, ಸಂಕಷ್ಟದ ಸಮಯದಲ್ಲೂ ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎಂಬುದನ್ನು ನೆನಪಿಸುವಂತಿದೆ.

ENGLISH SUMMARY…

Journalists Stranded Amid Nepal Floods; Strangers Offer Shelter
Kathmandu: Heavy overnight rains, floods and landslides battered Nepal’s Nuwakot and Rasuwa districts, disrupting rescue and relief operations.
The New Indian Express journalist Krishna Chaitanya and local journalist Jeevan Sharma were stranded as mountain roads became unsafe for night travel. They first took shelter at a car workshop before kind-hearted drivers offered them a place to sleep.
Chaitanya described the experience as one that would stay with him, praising the extraordinary warmth and generosity of ordinary Nepalis despite the devastation.
He also expressed his heartfelt condolences to those who lost loved ones, homes and livelihoods in the floods.

Key words: Journalists, Stranded Amid ,Nepal Floods,  Strangers, Shelter