ಬೆಂಗಳೂರು,ಸೆಪ್ಟಂಬರ್,2,2026 (www.justkannada.in); ಕಾರನ್ನು ಓವರ್ ಟೇಕ್ ಮಾಡುವ ವಿಚಾರಕ್ಕೆ ನಡೆದ ಜಗಳದ ಹಿನ್ನೆಲೆಯಲ್ಲಿ ಖಾಸಗಿ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಯನ್ನು ಅಪಹರಿಸಿ, ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಹಾಗೂ ಅವರ ನಾಲ್ವರು ಸ್ನೇಹಿತರ ವಿರುದ್ಧ ಕೇಳಿಬಂದಿದೆ.
ಕಾಮಾಕ್ಷಿಪಾಳ್ಯದ ನಿವಾಸಿ ಎಸ್. ಮನೀಶ್ ಗೌಡ ಅವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳವಾರ ಮಧ್ಯಾಹ್ನ 12.10ರ ಸುಮಾರಿಗೆ ಕಾಲೇಜಿನ ಹಿಂಭಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾಗ ತನ್ನನ್ನು ಬಲವಂತವಾಗಿ ಎಸ್‌ಯುವಿಗೆ ಎಳೆದೊಯ್ದು, ವಾಹನ ಚಲಿಸುತ್ತಿದ್ದ ಸಂದರ್ಭದಲ್ಲೇ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಳಿಕ ಆರ್.ಆರ್. ನಗರದ ಪಟ್ಟಣಗೆರೆಯಲ್ಲಿರುವ ಬಾರ್‌ವೊಂದರ ಬಳಿ ಕರೆದೊಯ್ದು ಹಲ್ಲೆ ನಡೆಸಿ, ಪಾರ್ಕಿಂಗ್ ಪ್ರದೇಶದ ಬಳಿ ಬಿಟ್ಟು ಹೋಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ನೇಹಿತನ ನೆರವಿನಿಂದ ಬಳಿಕ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಗೆ ಹಿಂದಿನ ದಿನ ನಡೆದಿದ್ದ ಕಾರು ಓವರ್ ಟೇಕ್ ವಿವಾದವೇ ಕಾರಣ ಎನ್ನಲಾಗಿದೆ. ಸೋಮವಾರ ಆರ್.ಆರ್. ನಗರದ ಮೂಲಕ ತೆರಳುತ್ತಿದ್ದಾಗ ಮನೀಶ್ ಅವರ ಕಾರು ಎಸ್‌ಯುವಿಯನ್ನು ಓವರ್ ಟೇಕ್ ಮಾಡಿದ್ದು, ಇದರಿಂದ ಎರಡೂ ಕಡೆಯ ಯುವಕರ ನಡುವೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ. ಮರುದಿನ ವಿವಾದ ಮುಂದುವರಿದು, ವಿಶ್ವವಿದ್ಯಾಲಯದ ಆವರಣದ ಹೊರಗೆ ವಿದ್ಯಾರ್ಥಿಯನ್ನು ಎದುರಿಸಿದ ವಿಜಯ್ ಪುತ್ರ ಹಾಗೂ ಸ್ನೇಹಿತರು ಆತನನ್ನು ಎಸ್ ಯುವಿಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ.
ಆರೋಪದಲ್ಲಿರುವ ಸಾಮ್ರಾಟ್ ಕೂಡ ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಘಟನೆ ಕುರಿತು ಮನೀಶ್ ನೀಡಿರುವ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ENGLISH SUMMARY…
Duniya Vijay’s Son Accused of Abducting, Assaulting Student
Bengaluru: Kannada actor Duniya Vijay’s son Samrat Vijay and four friends have been accused of allegedly abducting and assaulting a first-year BBA student following a dispute over overtaking a car.
The student, S. Manish Gowda, has filed a complaint with Kengeri Police, alleging that he was forcibly taken in an SUV from outside his private university and assaulted. He was later dropped near a parking area in RR Nagar and sought treatment at a private hospital.
Police are investigating the complaint. The alleged incident is said to have stemmed from an argument over a car-overtaking incident the previous day.
Key words: Duniya Vijay, Son, Accused, Abducting, Assaulting, Student










