ಬೆಂಗಳೂರು,ಆಗಸ್ಟ್,13,2026 (www.justkannada.in): ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಆದರೆ ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಕನ್ನಡ ಪರ ಹೋರಾಟಗಾರರು ಭೇಟಿ ಮಾಡಿ ಬಂದ್ ವಾಪಸ್ ಪಡೆದಿದ್ದಾಗಿ ಹೇಳಿದ್ದಾರೆ ಎಂದರು.
ಕನ್ನಡಪರ ಹೋರಾಟಗಾರ ಶಿವರಾಮೇಗೌಡ, ಸಾರಾ ಗೋವಿಂದು , ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಇಂದು ಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು. ತಮಿಳುನಾಡಿಗೆ ನೀರು ಹರಿಸದಂತೆ ಹಾಗೂ ಮೇಕೆದಾಟು ಯೋಜನೆ ಶೀಘ್ರವೇ ಜಾರಿಗೊಳಿಸುವಂತೆ ಮನವಿ ಮಾಡಿದರು.
ಕನ್ನಡಪರ ಹೋರಾಟಗಾರರ ಭೇಟಿ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಕನ್ನಡಪರ ಸಂಘಟನೆ ಹೋರಾಟಗಾರರು ಭೇಟಿ ಮಾಡಿದ್ದರು. ಅವರು ಬಂದ್ ವಾಪಸ್ ತೆಗದುಕೊಂಡಿದ್ದೇವೆ ಎಂದಿದ್ದಾರೆ. ರಾಜ್ಯದ ಹಿತಕ್ಕೆ ನಮಗೆ ಮನವಿ ಸಲ್ಲಿಸಿದ್ದಾರೆ ಅದನ್ನು ನಾನು ಪರಿಶೀಲಿಸುತ್ತೇನೆ ಎಂದರು.
Key words: Pro-Kannada activists, met, CM, DK Shivakumar







