Thursday, August 6, 2026

BDA Apartments

Home Front Page ಮಧ್ಯರಾತ್ರಿ ಎಬ್ಬಿಸಿ ಮಂತ್ರಿ ಮಾಡಿ ಡಿಸಿಎಂ ಸ್ಥಾನ ಕೊಟ್ರು- ಲಕ್ಷ್ಮಣ್ ಸವದಿ ಹೇಳಿಕೆ….

ಮಧ್ಯರಾತ್ರಿ ಎಬ್ಬಿಸಿ ಮಂತ್ರಿ ಮಾಡಿ ಡಿಸಿಎಂ ಸ್ಥಾನ ಕೊಟ್ರು- ಲಕ್ಷ್ಮಣ್ ಸವದಿ ಹೇಳಿಕೆ….

ಬಾಗಲಕೋಟೆ,ನ,4,2019(www.justkannada.in):  ಮಲಗಿದ್ದವನನ್ನು ಎಬ್ಬಿಸಿ ಮಂತ್ರಿ ಸ್ಥಾನ ಕೊಟ್ಟು ಬಳಿಕ ಡಿಸಿಎಂ ಮಾಡಿದ್ರು ಎಂದು` ತಾವು ಮಂತ್ರಿಯಾದ ಕುರಿತು ಡಿಸಿಎಂ ಲಕ್ಷ್ಮಣ್ ಸವದಿ ಅಚ್ಚರಿ ವ್ಯಕ್ತಪಡಿಸಿದರು.

ಬಾಗಲಕೋಟೆ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ನಾನು ಮಂತ್ರಿ ಆಗುತ್ತೇನೆ ಎಂದು ನನನೇ ಗೊತ್ತಿರಲಿಲ್ಲ. ಮಧ್ಯರಾತ್ರಿ 2 ಗಂಟೆಗೆ ಕರೆ ಬಂದಿತ್ತು. ಮಧ್ಯರಾತ್ರಿ 2 ಗಂಟೆಗೆ ಎಬ್ಬಿಸಿ ನನ್ನನ್ನ ಮಂತ್ರಿ ಮಾಡಿದ್ರು. ಡಿಸಿಎಂ ಸ್ಥಾನವನ್ನೂ ಕೊಟ್ಟರು. ನನ್ನನ್ನ ಮಂತ್ರಿ ಮಾಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದರು.  ಹಲವರು ಅದನ್ನ ಪ್ರಶ್ನಿಸಿದರು. ನಾನು ಎಂದಿಗೂ ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿರಲಿಲ್ಲ ಎಂದು ತಿಳಿಸಿದರು.

ಹರಮುನಿದರೂ  ಗುರು ಕಾಯುವನು ಎಂದು ಹೇಳಿದ್ದೆ. ಇಲ್ಲಿ ಹರ ಎಂದರೇ ಮತದಾರರು ಗುರು ಎಂದರೇ ಮಠಾಧೀಶರು. ಈ ಬಾರಿ ಮತದಾರರು ಮುನಿಸಿಕೊಂಡರು. ಆದರೆ ಗುರುಗಳು ನನ್ನನ್ನ ಎತ್ತಿ ನಿಲ್ಲಿಸಿದರು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

Key words: sleeping – minister – DCM -Laxman Savadi -bagalakote