ಬಣ್ಣದ ಲೋಕದಿಂದ ದೂರ ಹೋಗಲ್ಲ ಎಂದ ನಟಿ ಪ್ರೇಮ

ಬೆಂಗಳೂರು, ನವೆಂಬರ್ 04, 2019 (www.justkannada.in): ಯಾವುದೇ ಕಾರಣಕ್ಕೂ ನಟನೆಯಿಂದ ದೂರ ಸರಿಯುವ ಮಾತೆ ಇಲ್ಲ ಎಂದು ನಟಿ ಪ್ರೇಮಾ ಹೇಳಿದ್ದಾರೆ.

ನಾನು ಚಿತ್ರರಂಗದಿಂದ ದೂರ ಉಳಿಯುವ ಮಾತೆ ಇಲ್ಲ, ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ. ಮುಂದೆ ಸಿಕ್ಕರೆ ಖಂಡಿತ ಮಾಡುವೆ ಎಂದು ಹೇಳಿದ್ದಾರೆ ಕೊಡಗಿನ ಬೆಡಗಿ.

ಹುಬ್ಬಳ್ಳಿಯ ಖಾಸಗಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪ್ರೇಮಾ ನಂತರ ಸುದ್ದಿಗಾರೊಂದಿಗೆ ಮಾತನಾಡಿದ್ದಾರೆ. ನನಗೆ ಒಪ್ಪುವ ಪಾತ್ರಗಳಿರುವ ಕಥೆಗಳು ಸಿಕ್ಕಿಲ್ಲ. ಹಲವಾರು ಚಿತ್ರಗಳ ಆಫರ್ ಬಂದಿವೆ ಆದ್ರೆ ಅವು ನನಗೆ ಇಷ್ಟ ಆಗಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.