Thursday, August 6, 2026

BDA Apartments

Home Cinema ಪ್ರಧಾನಿ ಮೋದಿ ಎರಡು ಮುಖ ಬಯಲು ಮಾಡಿದ ಎಸ್’ಪಿಬಿ ಟ್ವೀಟ್ !

ಪ್ರಧಾನಿ ಮೋದಿ ಎರಡು ಮುಖ ಬಯಲು ಮಾಡಿದ ಎಸ್’ಪಿಬಿ ಟ್ವೀಟ್ !

ಬೆಂಗಳೂರು, ನವೆಂಬರ್ 04, 2019 (www.justkannada.in): ಪ್ರಧಾನಿ ನರೇಂದ್ರ ಮೋದಿ ಕುರಿತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಮಾಡಿರುವ ಟ್ವಿಟರ್ ಪೊಸ್ಟ್ ಒಂದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ದಕ್ಷಿಣದ ಚಿತ್ರೋದ್ಯಮವನ್ನು ನಿರ್ಲಕ್ಷ್ಯ ಮಾಡುವ ಪ್ರಧಾನಿ ಮೋದಿ ನಡೆಗೆ ಎಸ್ ಪಿಬಿ ಬೇಸರ ವ್ಯಕ್ತಪಡಿಸಿದ್ದು, ಅಂದು ನಡೆದ ಸಂದರ್ಭವೊಂದನ್ನು ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅ.29ರಂದು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ನಮಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಆದರೆ ಒಳಗಡೆ ನೋಡಿದರೆ ಬಾಲಿವುಡ್ ಸ್ಟಾರ್ ಗಳು ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಮೊಬೈಲ್ ಹೇಗೆ ಬಂತು ಎಂದು ಎಸ್ ಪಿಬಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.