Monday, September 21, 2026

BDA Apartments

ನಮ್ಮ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಯತೀಂದ್ರ ಹೋಗಿ ತನ್ನ ತಾಯಿ ಬಳಿ ಪ್ರಶ್ನೆ...
Home Front Page ನಮ್ಮ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಯತೀಂದ್ರ ಹೋಗಿ ತನ್ನ ತಾಯಿ ಬಳಿ ಪ್ರಶ್ನೆ ಕೇಳಲಿ-ಶೋಭಾ...

ನಮ್ಮ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಯತೀಂದ್ರ ಹೋಗಿ ತನ್ನ ತಾಯಿ ಬಳಿ ಪ್ರಶ್ನೆ ಕೇಳಲಿ-ಶೋಭಾ ಕರಂದ್ಲಾಜೆ

ಮೈಸೂರು,ಆಗಸ್ಟ್,7,2026 (www.justkannada.in): ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರು ಹೋಗಿ ತನ್ನ ತಾಯಿಗೆ ಈ ಬಗ್ಗೆ ಪ್ರಶ್ನೆ ಕೇಳಲಿ. ನಾವು ಯಾವುದನ್ನ ಆಚರಣೆ ಮಾಡುತ್ತೇವೆ ಎಂಬುದನ್ನ ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದು  ಹೇಳಿದ್ದಾರೆ.

ಇಂದು ಕೊನೆಯ ಆಷಾಢ ಶುಕ್ರವಾರ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಶೋಭಾ ಕರಂದ್ಲಾಜೆಗೆ ಬಿಜೆಪಿ ನಾಯಕರು ಸಾಥ್ ನೀಡಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ  ಪ್ರತಿಕ್ರಿಯಿಸಿ, ಯತೀಂದ್ರ ಹೋಗಿ ತನ್ನ ತಾಯಿಗೆ ಈ ಬಗ್ಗೆ ಪ್ರಶ್ನೆ ಕೇಳಲಿ. ನಾವು ಯಾರು, ನಮ್ಮ ಸಂಸ್ಕೃತಿ ಯಾವುದು, ನಮ್ಮ ಧರ್ಮ ಯಾವುದು? ನಾವು ಯಾವುದನ್ನ ಆಚರಣೆ ಮಾಡುತ್ತೇವೆ ಎಂಬುದನ್ನ ಯತೀಂದ್ರ ಅವರ ತಾಯಿಯ ಬಳಿ ಕೇಳಲಿ. ಯತೀಂದ್ರರನ್ನ ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿ ಅವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ಟಾಂಗ್ ಕೊಟ್ಟರು.ನಮ್ಮ ಸಂಸ್ಕೃತಿ shobha karndlaje

ಈ ಸಂಸ್ಕೃತಿ ಈ ಧರ್ಮ ಉಳಿಸುವವರಿಗೆ ತಾಯಿ ಚಾಮುಂಡಿ ಶಕ್ತಿ ಕೊಡಲಿ. ಮಹರಾಜರು ಈ ನೆಲದ ಸಂಸ್ಕೃತಿ ಧರ್ಮವನ್ನ ಉಳಿಸಿದರು. ಇವತ್ತು ಸರ್ಕಾರ ನಡೆಸುವವರು ಕೂಡ ಅದೇ ಸ್ಥಾನದಲ್ಲಿ ಇರುತ್ತಾರೆ. ಸಂಸ್ಕೃತಿ ಉಳಿಸುವವರಿಗೆ ತಾಯಿ ಆಶೀರ್ವಾದ ಇರಲಿ ಎಂದರು.ಧರ್ಮ jk02_new jk02 new

ಎಸ್ ಐಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲಿಟ್ ಆಗಿರುವುದು ಕರ್ನಾಟಕದಲ್ಲಿ, ಅದರಲ್ಲೂ ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮತಗಳು ಡಿಲಿಟ್ ಆಗಿದೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತ ಇಟ್ಟುಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲಿದರೂ ಕನ್ನಡಿಗರೇ. ಎಲ್ಲಾದರೂ ಇರಲಿ ಮತದಾರರಾಗಿರಲಿ ಎಂದರು.

Key words: Central Minister, Shobha karndlaje, visit, Chamundi hills