Thursday, August 6, 2026

BDA Apartments

Home Front Page ನಾನು ಸಿಎಂ ಮನೆಯ ಮಗ, ನಾನೇ ಮುಖ್ಯಮಂತ್ರಿ ಇದ್ದಂತೆ – ಕಾಂಗ್ರೆಸ್ ಶಾಸಕ

ನಾನು ಸಿಎಂ ಮನೆಯ ಮಗ, ನಾನೇ ಮುಖ್ಯಮಂತ್ರಿ ಇದ್ದಂತೆ – ಕಾಂಗ್ರೆಸ್ ಶಾಸಕ

ದಾವಣಗೆರೆ,ಆಗಸ್ಟ್,,6,2026 (www.justkannada.in):  “ನಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಯ ಮಗ , ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಾನೇ ಮುಖ್ಯಮಂತ್ರಿ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾರ್ಮಿಕವಾಗಿ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಿವಗಂಗಾ ಬಸವರಾಜ್, ನಾನು, ಶಿವನ ಮುಂದೆ ಇರುವ ನಂದಿ. ಶಿವನ ಮುಂದಿರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದ ಹಾಗೆ. ಮನೆಮಗನಿಗೆ ಅವರ ಆಶೀರ್ವಾದ ಸದಾ ಇದ್ದೇ ಇರುತ್ತದೆ.ನಾನು ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದು ಸಚಿವ ಸ್ಥಾನಕ್ಕಾಗಿ ಅಲ್ಲ ಸಂಪುಟ ವಿಸ್ತರಣೇ ಮುಗಿದ ಕಥೆ. ರಾಜೀನಾಮೆ ನೀಡುತ್ತೇನೆ ಅಂದವರು ಈಗ ಸಿಎಂ ಮನೆಯಲ್ಲಿದ್ದಾರೆ ಎಂದರು.

“ನಮ್ಮ ಪಕ್ಷದಲ್ಲಿ ಐದಾರು ಬಾರಿ ಗೆದ್ದ ಅನುಭವಸ್ಥ ಹಿರಿಯ ಶಾಸಕರಿದ್ದಾರೆ. ನನಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು, ಆದರೆ ಲಭಿಸಿಲ್ಲ. ಮುಂದೆ ಅವಕಾಶಗಳು ಸಿಗಲಿದ್ದು ಕಾದು ನೋಡುತ್ತೇನೆ. ಈಗ ಸಚಿವ ಸ್ಥಾನಕ್ಕಿಂತಲೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಿದೆ. ರೈತರ ಕೋಟಾದಡಿಯಲ್ಲಿ ಮಂತ್ರಿ ಸ್ಥಾನ ಕೇಳಿದ್ದೆ. ನಾನು ಮೊದಲ ಬಾರಿಗೆ ಗೆದ್ದಿರುವುದರಿಂದ ಮುಂದೆ ಸಾಕಷ್ಟು ಕಾಲಾವಕಾಶವಿದೆ ಎಂದರು.

ವಾಲ್ಮೀಕಿ ನಿಗಮದ ಹಗರಣದ ಆರೋಪ ಎದುರಿಸುತ್ತಿದ್ದ ಬಿ. ನಾಗೇಂದ್ರ ಅವರಿಗೆ ಮತ್ತೆ ಮಂತ್ರಿಗಿರಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಶಿವಗಂಗಾ ಬಸವರಾಜ್, ರಾಜಕೀಯದಲ್ಲಿ ಭ್ರಷ್ಟಾಚಾರದ ಆರೋಪ ಯಾರ ಮೇಲಿಲ್ಲ ಹೇಳಿ? ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆಯಿಲ್ಲ. ನಾಗೇಂದ್ರ ಅವರ ಮೇಲಿರುವುದು ಕೇವಲ ಆರೋಪವಷ್ಟೇ, ಅಪರಾಧ ಇನ್ನೂ ಸಾಬೀತಾಗಿಲ್ಲ. ಕಾನೂನು ಚೌಕಟ್ಟಿನಲ್ಲಿ ಅವರನ್ನು ಬಂಧಿಸಲಾಗಿತ್ತು, ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿರುವುದು ಸೂಕ್ತವಾಗಿದೆ ಎಂದರು.

Key words: I am, son of the CM’s family, Congress, MLA, Basavaraj Shivaganga