Thursday, August 6, 2026

BDA Apartments

Home Front Page ಕೇಂದ್ರದ NDA ಸರ್ಕಾರ 12 ವರ್ಷ ಅಧಿಕಾರದಲ್ಲಿದ್ರೂ ಸಾಲಮನ್ನಾ ಮಾಡಿಲ್ಲ-ಸಚಿವ ಸಂತೋಷ್ ಲಾಡ್ ಕಿಡಿ

ಕೇಂದ್ರದ NDA ಸರ್ಕಾರ 12 ವರ್ಷ ಅಧಿಕಾರದಲ್ಲಿದ್ರೂ ಸಾಲಮನ್ನಾ ಮಾಡಿಲ್ಲ-ಸಚಿವ ಸಂತೋಷ್ ಲಾಡ್ ಕಿಡಿ

ಧಾರವಾಡ,ಆಗಸ್ಟ್,6,2026 (www.justkannada.in):  ಬಿಜೆಪಿಯವರಿಗೆ ರೈತರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ.  ಕೇಂದ್ರದಲ್ಲಿ ಎನ್ ಡಿಎ ಸರ್ಕಾರ 12 ವರ್ಷ ಅಧಿಕಾರದಲ್ಲಿದ್ದರೂ ಸಾಲಮನ್ನಾ ಮಾಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್,  ಬಿಜೆಪಿಯವರು ವಿಶ್ವಗುರು ಬಳಿ ಹೋಗಿ ಹಣ ತರಲಿ. 12 ವರ್ಷ ಅಧಿಕಾರದಲ್ಲಿದ್ದರೂ ಸಾಲಮನ್ನಾ ಮಾಡಿಲ್ಲ. ಎನ್ ಡಿಎ ಒಮ್ಮೆಯೂ ರೈತರ ಸಾಲಮನ್ನಾ ಮಾಡಿಲ್ಲ.  ಯುಪಿಎ ಸರ್ಕಾರ ಇದ್ದಾಗ ಸಾಲಮನ್ನಾ ಮಾಡಿತ್ತು. 70 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಲಾಗಿದೆ ಎಂದರು.

ಸಿದ್ದರಾಮಯ್ಯ ಸಿಎಂ ಇದ್ದಾಗ ಸಾಲಮನ್ನಾ ಮಾಡಿದರು. ಬೆಳೆವಿಮೆ ಕಂಪನಿಗಳೂ ಕೇಂದ್ರ ಸರ್ಕಾರದ ಅಧೀನದಲ್ಲಿವೆ ಅವುಗಳ ಕಾರ್ಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗುತ್ತಿಲ್ಲ.  ಅವುಗಳ ಬಗ್ಗೆ ಪ್ರಶ್ನೆ ಕೇಳಿದರೇ ಬೇರೆ ರೀತಿ ಮಾತಾಡುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.

Key words: Minister, Santosh Lad, central government, waiving loans